ಅತ್ಯಾಚಾರದ ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ ಪೊಲೀಸ್ ಅಧಿಕಾರಿ ವಜಾ 

ಅತ್ಯಾಚಾರದ ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೆ ಯತ್ನಿಸಿದ್ದ ಪೊಲೀಸ್ ಅಧಿಕಾರಿ ಕೈಲಾಶ್ ಬೋಹ್ರಾಗೆ ರಾಜಸ್ಥಾನ ಸರ್ಕಾರ ಒತ್ತಾಯಪೂರ್ವಕ ನಿವೃತ್ತಿಯನ್ನು ಆದೇಶಿಸಿದೆ. 

Published: 03rd April 2021 01:33 AM  |   Last Updated: 03rd April 2021 01:18 PM   |  A+A-


Rajasthan cop accused of demanding sexual favours from rape survivor dismissed from service

ಅತ್ಯಾಚಾರದ ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ ಪೊಲೀಸ್ ಅಧಿಕಾರಿ ವಜಾ

Posted By : Srinivas Rao BV
Source : The New Indian Express

ಜೈಪುರ: ಅತ್ಯಾಚಾರದ ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೆ ಯತ್ನಿಸಿದ್ದ ಪೊಲೀಸ್ ಅಧಿಕಾರಿ ಕೈಲಾಶ್ ಬೋಹ್ರಾಗೆ ರಾಜಸ್ಥಾನ ಸರ್ಕಾರ ಒತ್ತಾಯಪೂರ್ವಕ ನಿವೃತ್ತಿಯನ್ನು ಆದೇಶಿಸಿದೆ. 

ಕಳೆದ ತಿಂಗಳು ಈ ಪೊಲೀಸ್ ಅಧಿಕಾರಿ ಅತ್ಯಾಚಾರ ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಕ್ಕಾಗಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಬೇಡಿಕೆ ಇಟ್ಟಿದ್ದ. 

ಕೈಲಾಶ್ ಬೋಹ್ರಾ ವಿರುದ್ಧ ರಾಜಸ್ಥಾನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು ರಾಜ್ಯಪಾಲರ ಆದೇಶದ ಬಳಿಕ ರಾಜಸ್ಥಾನ ಪೊಲೀಸ್ ಸೇವೆ (ಆರ್ ಪಿಎಸ್) ನಿಂದ ಆತನನ್ನು ವಜಾಗೊಳಿಸಲಾಗಿದೆ.

ಮಹಿಳೆಯರ ಮೇಲೆ ನಡೆಯುವ ಅಪರಾಧಗಳನ್ನು ತನಿಖೆ ಮಾಡುವ  ವಿಭಾಗದಲ್ಲಿ ಕೈಲಾಶ್ ಬೋಹ್ರಾ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೈಲಾಶ್ ಬೋಹ್ರಾ ಅವರನ್ನು ಮಾ.14 ರಂದು ಬಂಧಿಸಿದ್ದರು. 

ದೂರು ದಾಖಲಿಸಿಕೊಂಡು ಕ್ರಮ ಕೈಗೊಳುವುದಕ್ಕೆ ಅತ್ಯಾಚಾರ ಸಂತ್ರಸ್ತೆಯಿಂದ ಮೊದಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ, ಆದರೆ ಈ ಬಳಿಕ ತನ್ನೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸುವಂತೆಯೂ ಸಂತ್ರಸ್ತೆಗೆ ಒತ್ತಾಯಿಸಿದ್ದ. ಈ ಘಟನೆ ರಾಜಸ್ಥಾನದ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತ್ತು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp