ಹಿಂದೂ, ಮುಸಲ್ಮಾನರ ಮತಬ್ಯಾಂಕ್ ವಿಭಜನೆಗೆ ಬಿಜೆಪಿಯಿಂದ ಎಐಎಂಐಎಂ, ಐಎಸ್ಎಫ್ ಗೆ ಹಣ: ಮಮತಾ ಬ್ಯಾನರ್ಜಿ ಆರೋಪ

ತನ್ನ ರಾಜಕೀಯ ಲಾಭಕ್ಕಾಗಿ ಭಾರತೀಯ ಜನತಾ ಪಕ್ಷ ಹಿಂದೂ-ಮುಸಲ್ಮಾನರ ವಿಭಜಿಸಲು ಎಐಎಂಐಎಂ, ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಗೆ ಹಣ ನೀಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

Published: 03rd April 2021 02:58 PM  |   Last Updated: 03rd April 2021 03:06 PM   |  A+A-


Mamata Banerjee

ಮಮತಾ ಬ್ಯಾನರ್ಜಿ

Posted By : Srinivasamurthy VN
Source : ANI

ಕೋಲ್ಕತಾ: ತನ್ನ ರಾಜಕೀಯ ಲಾಭಕ್ಕಾಗಿ ಭಾರತೀಯ ಜನತಾ ಪಕ್ಷ ಹಿಂದೂ-ಮುಸಲ್ಮಾನರ ವಿಭಜಿಸಲು ಎಐಎಂಐಎಂ, ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಗೆ ಹಣ ನೀಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮೂರನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ರೈದಿಘಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, ಬಿಜೆಪಿ ಮತ್ತು ಎಐಎಂಐಎಂ, ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಪಕ್ಷಗಳ ವಿರುದ್ಧ  ಕಿಡಿಕಾರಿದರು.

'ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಹರೇ ಕೃಷ್ಣ ಹರೇ ಹರೇ, ತೃಣಮೂಲ ಘರೆ ಘರೆ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಹರೇ ಕೃಷ್ಣ ಹರೇ ಹರೇ, ಹಿಂದೂ, ಮುಸ್ಲಿಂ ಭಾಗ್ ಕರೇ, ಪರಿಶಿಷ್ಟ ಜಾತಿ (ಎಸ್‌ಸಿ) ಭಾಗ್ ಕರೇ... ಎಂದು ಹೇಳುತ್ತಿದೆ. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಕುಳಿತು ಜೊತೆಯಾಗಿ ಚಹಾ ಸೇವಿಸುವುದು ನಮ್ಮ ಭಾರತ ದೇಶದ ಸಂಸ್ಕೃತಿಯಾಗಿದೆ. ಹಿಂದೂ ಮತ್ತು ಮುಸ್ಲಿಮರು ದುರ್ಗಾ ಪೂಜೆಯನ್ನು ಒಟ್ಟಿಗೇ ಆಚರಿಸುತ್ತಾರೆ. ಇದೇ ಕಾರಣಕ್ಕೆ ಈ ಎರಡೂ ಸಮುದಾಯಗಳ ನಡುವೆ ಬಿಜೆಪಿ ಗೊಂದಲ ಮೂಡಿಸಿ ವಿಭಜನೆಗೆ ಯತ್ನಿಸುತ್ತಿದೆ.

ನಮ್ಮ ಹಳ್ಳಿಗಳಲ್ಲಿ ಅಶಾಂತಿ ಇದ್ದರೆ ಬಿಜೆಪಿಗೆ ಲಾಭವಾಗುತ್ತದೆ. ಹೀಗಾಗಿ ಎಐಎಂಐಎಂ ಮತ್ತು ಐಎಸ್‌ಎಫ್ ಗೆ ಬಿಜೆಪಿ ಹಣ ನೀಡಿ ಮತಬ್ಯಾಂಕ್ ವಿಭಜನೆಗೆ ಯತ್ನಿಸುತ್ತಿದೆ. ಆದರೆ ಇಂತಹ ವಿಭಜನೆಯನ್ನು ನೀವು ಬಯಸುತ್ತೀರಾ..? ನಿಮಗೆ ಎನ್‌ಆರ್‌ಸಿ ಬೇಡವಾದರೆ ಅವರಿಗೆ ಮತ ಚಲಾಯಿಸಬೇಡಿ. ಅವರಿಗೆ ಎಐಎಂಐಎಂ ಮತ್ತು ಐಎಸ್ಎಫ್ ಗೆ ಮತ ನೀಡುವುದರಿಂದ ನೀವು ಬಿಜೆಪಿಗೆ ಮತ ನೀಡಿದ್ದೀರಿ ಎಂದರ್ಥ. ನಂದಿಗ್ರಾಮದಲ್ಲಿ ನಿಮ್ಮ ಮಗಳು ಮತ್ತು ಮಕ್ಕಳನ್ನು ಅಪಹರಿಸಲಾಗುತ್ತದೆ. ಇದೇ ರೀತಿಯ ಈ ಹೊರಗಿನ ಗೂಂಡಾಗಳು ಬೆದರಿಸುತ್ತಿದ್ದಾರೆ. ಬಿಜೆಪಿಗಾಗಲಿ ಅಥವಾ ಅದರ ಹೊರಗಿನ ಗುಂಡಾಗಳಿಗೆ  ಮತಗಳನ್ನು ನೀಡಬೇಡಿ.

ಟಿಎಂಸಿಯಿಂದ ಟಿಕೆಟ್ ನಿರಾಕರಿಸಿದ ಜನರನ್ನು ಹೆಸರಿಸಿದ ಮಮತಾ, ಅವರನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದೆ. ಚುನಾವಣೆಗಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಮತಾ ಆರೋಪಿಸಿದರು. 'ನಿಮಗೆ ಮಮತಾ ಬೇಕಾದರೆ, ಟಿಎಂಸಿಗೆ ಮತ ನೀಡಿ. ಇದು ದೆಹಲಿ ಚುನಾವಣೆಯಲ್ಲ.. ಬಂಗಾಳದ  ಚುನಾವಣೆ.. ಮತ್ತೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆಗೂ ನೀರು ತರುವ ಭರವಸೆಯನ್ನು ಮಮತಾ ಬ್ಯಾನರ್ಜಿ ನೀಡಿದರು. ಅಲ್ಲದೆ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಕ್ರಮವಾಗಿ ಮಾರ್ಚ್ 27 ಮತ್ತು ಏಪ್ರಿಲ್ 1 ರಂದು ನಡೆಯಿತು. ಮುಂದಿನ ಹಂತದ ಮತದಾನ ಏಪ್ರಿಲ್ 6 ರಂದು ನಡೆಯಲಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp