ಮೊಘಲರು, ಬ್ರಿಟೀಷರ ಹೆಸರಿನ ರಸ್ತೆಗಳಿಗೆ ಮರುನಾಮಕರಣಕ್ಕೆ ಪಟ್ಟು ಹಿಡಿದ ಅಖಾಡ ಪರಿಷತ್!

ಮೊಘಲರು, ಬ್ರಿಟೀಷರ ಹೆಸರಿನ ರಸ್ತೆಗಳಿಗೆ ಮರುನಾಮಕರಣ ಮಾಡುವುದಕ್ಕೆ ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಆಗ್ರಹಿಸಿದೆ. 

Published: 04th April 2021 04:05 PM  |   Last Updated: 04th April 2021 04:05 PM   |  A+A-


Akhara Parishad seeks renaming roads, draws Oppn ire

ಮೊಘಲರು, ಬ್ರಿಟೀಷರ ಹೆಸರಿನ ರಸ್ತೆಗಳಿಗೆ ಮರುನಾಮಕರಣಕ್ಕೆ ಪಟ್ಟು ಹಿಡಿದ ಅಖಾಡ ಪರಿಷತ್!

Posted By : Srinivas Rao BV
Source : IANS

ಪ್ರಯಾಗ್ ರಾಜ್: ಮೊಘಲರು, ಬ್ರಿಟೀಷರ ಹೆಸರಿನ ರಸ್ತೆಗಳಿಗೆ ಮರುನಾಮಕರಣ ಮಾಡುವುದಕ್ಕೆ ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಆಗ್ರಹಿಸಿದೆ. 

ಎಬಿಎಪಿ ಮುಖ್ಯಸ್ಥರಾದ ಮಹಾಂತ್ ನರೇಂದ್ರ ಗಿರಿ ಈ ಬಗ್ಗೆ ಮಾತನಾಡಿದ್ದು, ಮೊಘಲ್ ದಾಳಿಕೋರರು ಹಾಗೂ ಬ್ರಿಟೀಷರ ಹೆಸರುಗಳನ್ನು ಹೊಂದಿರುವ ರಸ್ತೆಗಳಿಗೆ ಭಾರತ ಸರ್ಕಾರ ಮರುನಾಮಕರಣ ಮಾಡಬೇಕೇಂದು ಆಗ್ರಹಿಸಿದ್ದಾರೆ. 

ಭಾರತಕ್ಕೆ ಸ್ವಾತಂತ್ರ್ಯ ದೊರೆತು 74 ವರ್ಷಗಳಾಯಿತು. ತುಘ್ಲಕ್, ಹ್ಯುಮಾಯೂನ್, ಬಾಬರ್, ಬ್ರಿಟೀಷರ ಆದಿಯಾಗಿ ದಾಳಿಕೋರರ ಹೆಸರುಗಳು ದೆಹಲಿಯಲ್ಲಿ ಇಂದಿಗೂ ರಸ್ತೆಗಳಿಗೆ ನಾಮಕರಣವಾಗಿರುವುದು ಕಾಣಸಿಗುತ್ತವೆ. 

"ದಾಳಿಕೋರರ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭ್ ಭಾಯ್ ಪಟೇಲ್, ಗುಲ್ಜಾರಿ ಲಾಲ್ ನಂದಾ, ವೀರ್ ಅಬ್ದುಲ್ ಹಮೀದ್ ಅವರ ಹೆಸರುಗಳನ್ನಿಡಬೇಕು" ಎಂದು ಆಗ್ರಹಿಸಿದ್ದಾರೆ. 

ನಮ್ಮ ದೇಶವನ್ನು ಲೂಟಿ ಮಾಡಿದ, ವಿಭಜಿಸಿದ ದಾಳಿಕೋರರ ಹೆಸರುಗಳನ್ನೇಕೆ ಇನ್ನೂ ರಸ್ತೆಗಳಿಗೆ ಇಡಬೇಕು? ದೇಶದ ಬಹುತೇಕ ಮಂದಿ, ಪ್ರಮುಖವಾಗಿ ಯುವಜನತೆ ಇದರಿಂದ ಮುಜುಗರಕ್ಕೊಳಗಾಗುತ್ತಿದ್ದಾರೆ ಎಂದು ಎಬಿಎಪಿ ಮುಖ್ಯಸ್ಥರಾದ ಮಹಾಂತ್ ನರೇಂದ್ರ ಗಿರಿ ಹೇಳಿದ್ದಾರೆ. 

ಎಬಿಎಪಿ ಹೇಳಿಕೆಯನ್ನು ರಾಜಕೀಯ ವಲಯದಲ್ಲಿರುವವರು ವಿವಾದವಾಗಿಸಿದ್ದಾರೆ. ಸಮಾಜವಾದಿ ಪಕ್ಷದ ಜಿಲ್ಲಾ ವಕ್ತಾರ ದಾನ್ ಬಹದ್ದೂರ್ ಮಧುರ್ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಭಾರತವನ್ನು ಶ್ರೇಷ್ಠಗೊಳಿಸುವುದಕ್ಕೆ ಮೊಘಲ್ ದೊರೆಗಳು ನೀಡಿದ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ದೇಶದಲ್ಲಿರುವ ನಿರುದ್ಯೋಗ, ಹಣದುಬ್ಬರದಂತಹ ಸಮಸ್ಯೆಗಳಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಕೇಸರಿ ಪಡೆ ಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಜಿಲ್ಲಾ ವಕ್ತಾರ ದಾನ್ ಬಹದ್ದೂರ್ ಮಧುರ್ ಆರೋಪಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp