ಗಾಯಗೊಂಡ ಕಾಲನ್ನು ಅತ್ತಿತ್ತಾ ಅಲುಗಾಡಿಸುತ್ತಿರುವ ಮಮತಾ ಬ್ಯಾನರ್ಜಿ ವಿಡಿಯೋ ವೈರಲ್! ಬಿಜೆಪಿ ವಾಗ್ದಾಳಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ಹ್ ಚೇರ್ ನಲ್ಲಿ ಕುಳಿತು ತಮ್ಮ ಗಾಯಗೊಂಡ ಕಾಲನ್ನು ಅತ್ತಿತ್ತಾ ಅಲುಗಾಡಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published: 04th April 2021 01:26 PM | Last Updated: 04th April 2021 01:32 PM | A+A A-

ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ಹ್ ಚೇರ್ ನಲ್ಲಿ ಕುಳಿತು ತಮ್ಮ ಗಾಯಗೊಂಡ ಕಾಲನ್ನು ಅತ್ತಿತ್ತಾ ಅಲುಗಾಡಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಅವರ ಎದುರಾಳಿಗಳು, ಚುನಾವಣೆಯಲ್ಲಿ ಮತದಾರರ ಸಹಾನೂಭೂತಿ ಗಳಿಸಲು ಮಮತಾ ಆಡುತ್ತಿರುವ ನಾಟಕವಿದ್ದು ಎಂದು ಆಕ್ರೋಶ ವ್ಯಕ್ಕಪಡಿಸಿವೆ.
ಆದಾಗ್ಯೂ, ಟಿಎಂಸಿ, ಪಕ್ಷದ ಮುಖ್ಯಸ್ಥೆಯನ್ನು ಅವಮಾನಿಸುವುದನ್ನು ಖಂಡಿಸಿದ್ದು, ಮಹಿಳೆಯರಿಗೆ ಹೇಗೆ ಗೌರವ ನೀಡಬೇಕು ಎಂಬುದನ್ನು ಬಿಜೆಪಿ ಕಲಿಯಬೇಕಾಗಿದೆ ಎಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Mamata Bannerjee’s broken leg wants to go dancing...#BengalElections2021 pic.twitter.com/ZPsD5srr3y
— Ashoke Pandit (@ashokepandit) April 2, 2021
ಬಿಜೆಪಿ ವಕ್ತಾರ ಪ್ರೊಣೊಯ್ ರಾಯ್ ಕೂಡಾ ಫೇಸ್ ಬುಕ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮಮತಾ ಬ್ಯಾನರ್ಜಿ ಇಂತಹ ನಾಟಕವಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.