ಪಂಜಾಬ್ನ ಗಡಿ ಗ್ರಾಮಗಳಲ್ಲಿನ ಜೀತಪದ್ಧತಿ ಸಮಸ್ಯೆಯ ಬಗ್ಗೆ ಪಂಜಾಬ್ ರೈತರನ್ನು ದೂಷಿಸಿಲ್ಲ: ಕೇಂದ್ರ ಗೃಹ ಸಚಿವಾಲಯ
ರೈತರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಗೃಹ ಸಚಿವಾಲಯವು ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ವರದಿಗಳು ಬಂದಿದ್ದು, ಇದು ಆಧಾರ ರಹಿತ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
Published: 04th April 2021 08:33 PM | Last Updated: 04th April 2021 08:33 PM | A+A A-

ಕೇಂದ್ರ ಗೃಹ ಸಚಿವಾಲಯ
ನವದೆಹಲಿ: ರೈತರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಗೃಹ ಸಚಿವಾಲಯವು ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ವರದಿಗಳು ಬಂದಿದ್ದು, ಇದು ಆಧಾರ ರಹಿತ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಈ ವರದಿಗಳು ದಾರಿ ತಪ್ಪಿಸುವಂತಿವೆ. ಎರಡು ವರ್ಷಗಳ ಅವಧಿಯಲ್ಲಿ ಪಂಜಾಬ್ನ ನಾಲ್ಕು ಸೂಕ್ಷ್ಮ ಗಡಿ ಜಿಲ್ಲೆಗಳಲ್ಲಿ ಉದ್ಭವಿಸುತ್ತಿರುವ ಸಾಮಾಜಿಕ ಆರ್ಥಿಕ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಸಿಎಪಿಎಫ್ ಗೃಹ ಸಚಿವಾಲಯದ ಗಮನಕ್ಕೆ ತಂದಿದ್ದು, ಇದರ ಬಗ್ಗೆ ಸರಳವಾದ ಅವಲೋಕನದ ಮೂಲಕ ಸಂಪಾದಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.
ಮೊದಲನೆಯದಾಗಿ, ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳ ಬಗ್ಗೆ ವಾಡಿಕೆಯ ಸಂವಹನದ ಭಾಗವಾಗಿ ಗೃಹ ಸಚಿವಾಲಯವು ನಿರ್ದಿಷ್ಟ ರಾಜ್ಯ ಅಥವಾ ರಾಜ್ಯಗಳಿಗೆ ಬರೆಯುವ ಪತ್ರಕ್ಕೆ ಯಾವುದೇ ದುರುದ್ದೇಶ ಹೊಂದಿಲ್ಲ ಎಂದು ಹೇಳಿದೆ.