ಬಂಗಾಳದಲ್ಲಿ ಎನ್ಆರ್ ಸಿ ಇಲ್ಲ, ಸಿಎಎ ಜಾರಿಗೊಳಿಸುತ್ತೇವೆ: ವಿಜಯವರ್ಗೀಯ!
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎನ್ ಆರ್ ಸಿ ಪರಿಷ್ಕರಣೆ ನಡೆಯಲಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಪ್ರತಿಕ್ರಿಯೆ ನೀಡಿದ್ದಾರೆ.
Published: 04th April 2021 04:39 PM | Last Updated: 04th April 2021 04:39 PM | A+A A-

ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎನ್ ಆರ್ ಸಿ ಪರಿಷ್ಕರಣೆ ನಡೆಯಲಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಎನ್ ಆರ್ ಸಿ ಪರಿಷ್ಕರಣೆ ಮಾಡುವುದಿಲ್ಲ. ಆದರೆ ಸಿಎಎ ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಧಾರ್ಮಿಕ ನೆಲೆಗಟ್ಟಿನಲ್ಲಿ ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವ ಸಿಎಎ ಕಾಯ್ದೆಯನ್ನು ಬಂಗಾಳದಲ್ಲಿ ಜಾರಿಗೆ ತರಲಾಗುವುದು ಎಂದು ವಿಜಯವರ್ಗೀಯ ಹೇಳಿದ್ದಾರೆ.
ಚುನಾವಣೆಯ ಬಳಿಕ ಸಿಎಎ ಜಾರಿಗೆ ತರುವ ಗುರಿ ಹೊಂದಿದ್ದೇವೆ. ಇದು ನಮ್ಮ ಪ್ರಣಾಳಿಕೆಯ ಭಾಗವಾಗಿತ್ತು. ಆದರೆ ಎನ್ ಆರ್ ಸಿ ಜಾರಿಗೆ ತರುವ ಉದ್ದೇಶವಿಲ್ಲ ಎಂದು ವಿಜಯವರ್ಗೀಯ ಸ್ಪಷ್ಟಪಡಿಸಿದ್ದಾರೆ. ಬಂಗಾಳದಲ್ಲಿ 72 ಲಕ್ಷ ಮಂದಿಗೆ ಸಿಎಎಯಿಂದ ಸಹಾಯವಾಗಲಿದೆ ಎಂದು ಬಿಜೆಪಿ ಹೇಳಿದೆ.