ರಾಜಕೀಯಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ಬಿಡುತ್ತೇನೆ: ಕಮಲ ಹಾಸನ್

ರಾಜಜೀಯ ಜೀವನಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ತೊರೆಯುವುದಕ್ಕೆ ಸಿದ್ಧ ಎಂದು ನಟ- ರಾಜಕಾರಣಿ, ಮಕ್ಕಳ ನೀತಿ ಮೈಯ್ಯಂ ನ ಸ್ಥಾಪಕ ಕಮಲ ಹಾಸನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

Published: 04th April 2021 06:30 PM  |   Last Updated: 04th April 2021 06:30 PM   |  A+A-


Kamal hassan

ಕಮಲ ಹಾಸನ್

Posted By : Srinivas Rao BV
Source : The New Indian Express

ಕೊಯಂಬತ್ತೂರು: ರಾಜಕೀಯ ಜೀವನಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ತೊರೆಯುವುದಕ್ಕೆ ಸಿದ್ಧ ಎಂದು ನಟ- ರಾಜಕಾರಣಿ, ಮಕ್ಕಳ ನೀತಿ ಮೈಯ್ಯಂ ನ ಸ್ಥಾಪಕ ಕಮಲ ಹಾಸನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

"ಜನಸೇವೆಯ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಂಡಿರುವ ರಾಜಕೀಯಕ್ಕೆ ಸಿನಿಮಾಗಳು ಅಡ್ಡಿಯಾಗುವುದಾದರೆ, ಈಗ ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳ ಯೋಜನೆಗಳನ್ನೂ ಪೂರ್ಣಗೊಳಿಸಿ ಸಿನಿಮಾ ಕ್ಷೇತ್ರವನ್ನು ತೊರೆಯುತ್ತೇನೆ ಎಂದು ಹೇಳಿದ್ದಾರೆ.
 
ತಾವು ಈ ವರೆಗೂ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಶೇ.30 ರಷ್ಟು ಮಂದಿಯ ಪೈಕಿ ಇದ್ದ ಕಾರಣ ತಮ್ಮ ರಾಜಕೀಯ ಪ್ರವೇಶ ಐತಿಹಾಸಕವಾದದ್ದು ಎಂದು ಕಮಲಹಾಸನ್ ಹೇಳಿದ್ದು, ಮಾಜಿ ಸಿಎಂ ಎಂಜಿಆರ್ ತಮ್ಮ ಆದರ್ಶಗಳನ್ನು, ಜನಸೇವೆಯ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಶಾಸಕರಾದ ನಂತರವೂ ನಟನೆ ಮುಂದುವರೆಸಿದ್ದರು. "ನಾನು ಸಿನಿಮಾ ರಾಜಕಾರಣಕ್ಕೆ ಅಡ್ಡಿಯಾಗುವುದಾದರೆ ಜನ ಸೇವೆಗಾಗಿ ಸಿನಿಮಾವನ್ನೂ ಬಿಡುತ್ತೇನೆ, ರಾಜಕಾರಣದಲ್ಲಿ ನನ್ನ ಜೊತೆಗಿರುವವರೂ ಸಹ ನಾನು ರಾಜಕಾರಣ ಬಿಟ್ಟು ಸಿನಿಮಾಗೆ ಹೋಗುವುದಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಕಮಲ ಹಾಸನ್ ಹೇಳಿದ್ದಾರೆ. 

ನೋಡೋಣ ಯಾರು ಕಣ್ಮರೆಯಾಗುತ್ತಾರೆ ಎಂಬುದನ್ನು ಜನರು ನಿರ್ಧರಿಸಬೇಕಿದೆ ಎಂದು ಕಮಲಹಾಸನ್ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp