ಸಮಾಜವಾದಿ ಪಕ್ಷ ಸ್ಥಾಪಕ ಸದಸ್ಯ, ಉತ್ತರಪ್ರದೇಶ ಮಾಜಿ ಸಚಿವ ಭಗವತಿ ಸಿಂಗ್ ನಿಧನ

ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯ ಮತ್ತು ಉತ್ತರ ಪ್ರದೇಶ ಮಾಜಿ ಸಚಿವ ಭಗವತಿ ಸಿಂಗ್ (89) ಭಾನುವಾರ ನಿಧನರಾದರು.

Published: 04th April 2021 07:35 PM  |   Last Updated: 04th April 2021 07:35 PM   |  A+A-


ಭಗವತಿ ಸಿಂಗ್

Posted By : Raghavendra Adiga
Source : PTI

ಲಖನೌ: ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯ ಮತ್ತು ಉತ್ತರ ಪ್ರದೇಶ ಮಾಜಿ ಸಚಿವ ಭಗವತಿ ಸಿಂಗ್ (89) ಭಾನುವಾರ ನಿಧನರಾದರು.

ಭಗವತಿ ಸಿಂಗ್ ತಾವು ವಾಸಿಸುತ್ತಿದ್ದ ಲಖನೌದ ಬಕ್ಷಿ ಕಾ ತಲಾಬ್ ಪ್ರದೇಶದ ಪದವಿ ಕಾಲೇಜಿನಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಮೃತದೇಹ ದಾನ ಮಾಡುವುದಾಗಿ ವಾಗ್ದಾನ ಮಾಡಿದ್ದರಿಂದ ಸಿಂಗ್ ಅವರ ಅಂತ್ಯಕ್ರಿಯೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಮಾಜವಾದಿ ಪಕ್ಷ ಮುಖ್ಯಸ್ಥ ಅಖಿಲೇಶ್ ಯಾದವ್ "ದೇವರು ಅವರ ಆತ್ಮಕ್ಕೆಶಾಂತಿ ನೀಡಲಿ, ದುಃಖವನ್ನು ರಿಸಲು ಕುಟುಂಬಕ್ಕೆ ಶಕ್ತಿ ನೀಡಲಿ" ಎಂದು ಹೇಳಿದ್ದಾರೆ.

ಎಸ್‌ಪಿ ಸಂಸ್ಥಾಪಕ ಸದಸ್ಯರಾಗಿದ್ದ ಸಿಂಗ್ ಅವರನ್ನು ಮುಲಾಯಂ ಸಿಂಗ್ ಯಾದವ್ ಅವರ ಆಪ್ತರು ಎಂದು ಪರಿಗಣಿಸಲಾಗಿತ್ತು.

ಸಿಂಗ್ ಅವರಿಗೆ ಗೌರವ ಸೂಚಕವಾಗಿ ಎಸ್‌ಪಿ ಮುಖ್ಯಸ್ಥರ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp