ಇಷ್ಟು ಕೆಟ್ಟ ಪ್ರಧಾನಿ, ಗೃಹ ಸಚಿವರನ್ನು ನೋಡಿಯೇ ಇಲ್ಲ: ಮೋದಿ, ಅಮಿತ್ ಶಾ ವಿರುದ್ಧ ಮಮತಾ ವಾಗ್ದಾಳಿ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಣ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾರಂತ ಕೆಟ್ಟ ಪ್ರಧಾನಿ, ಗೃಹ ಸಚಿವರನ್ನು ನೋಡಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Published: 04th April 2021 09:07 PM  |   Last Updated: 04th April 2021 09:07 PM   |  A+A-


Mamata Banerjee

ಮಮತಾ ಬ್ಯಾನರ್ಜಿ

Posted By : Vishwanath S
Source : Online Desk

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಣ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾರಂತ ಕೆಟ್ಟ ಪ್ರಧಾನಿ, ಗೃಹ ಸಚಿವರನ್ನು ನೋಡಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೂಗ್ಲಿಯ ಫುರೂಶುರಾ ಸಮಾವೇಶದಲ್ಲಿ ಭಾಗಿಯಾಗಿದ್ದ ಮಮತಾ ಬ್ಯಾನರ್ಜಿ ಅವರು, ನಾನು ಏಳು ಬಾರಿ ಸಂಸದೆಯಾಗಿದ್ದೇನೆ. ರಾಜಕೀಯ ಜೀವನದಲ್ಲಿ ಹಲವು ಪ್ರಧಾನಿಗಳು ಮತ್ತು ಸಚಿವರನ್ನು ಕಂಡಿದ್ದೇನೆ. ಆದರೆ ಇಷ್ಟು ಕೆಟ್ಟವರನ್ನು ನೋಡಿರಲಿಲ್ಲ ಎಂದರು.

ಬಂಗಾಳದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬದಲಾವಣೆಗಾಗಿ ಬಂದಿದ್ದೇವೆ ಎಂದು ಹಸಿ ಹಸಿ ಸುಳ್ಳುಗಳನ್ನು ಹೇಳಿ ಮತ ಕೇಳುತ್ತಿದ್ದಾರೆ. ನಾನಾಗೇ ಹಿಂದೆ ಸರಿಯುವ ಮನಸ್ಸು ಮಾಡಬೇಕು ಹೊರತು ಯಾರೂ ನನ್ನನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಇನ್ನು ಕೊಲೆ ಮಾಡುವ, ಸುಳ್ಳು ಹೇಳುವವರು ಬಂಗಾಳಕ್ಕೆ ಬಂದಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp