ಛತ್ತೀಸ್ ಘರ್ ಎನ್‌ಕೌಂಟರ್: ನಾಪತ್ತೆಯಾದ ಯೋಧನನ್ನು ನಕ್ಸಲರು ಅಪಹರಿಸಿರುವ ಸಾಧ್ಯತೆ ಇದೆ- ಸಿಆರ್‌ಪಿಎಫ್

ಛತ್ತೀಸ್ ಘರ್ ನ ಬಿಜಾಪುರದಲ್ಲಿ ಶನಿವಾರ ನಾಪತ್ತೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿರಬಹುದು ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.

Published: 05th April 2021 07:42 PM  |   Last Updated: 05th April 2021 07:51 PM   |  A+A-


ನಕ್ಸಲ್ ವಿರುದ್ಧ ಕಾರ್ಯಾಚರಣೆ-ಫೈಲ್ ಚಿತ್ರ

Posted By : Raghavendra Adiga
Source : ANI

ನವದೆಹಲಿ: ಛತ್ತೀಸ್ ಘರ್ ನ ಬಿಜಾಪುರದಲ್ಲಿ ಶನಿವಾರ ನಾಪತ್ತೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿರಬಹುದು ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ. "ಛತ್ತೀಸ್ ಘರ್ ನಲ್ಲಿ ದಾಳಿ ನಡೆಸಿದ ಯೋಧ ಪಡೆಯ ಭಾಗವಾಗಿದ್ದ ಯೋಧ ಕಾಣೆಯಾದ ಕಾರಣ, ನಕ್ಸಲರಿಂದ ಆತನನ್ನು ಅಪಹರಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ" ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.

ಸುಕ್ಮಾ-ಬಿಜಾಪುರ ಗಡಿಯಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಶನಿವಾರ ಮಧ್ಯಾಹ್ನ ಮುಖಾಮುಖಿ ದಾಳಿ ನಡೆದಿದೆ.ದಾಳಿಯಲ್ಲಿ ಕನಿಷ್ಠ 22 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಸುಮಾರು 31 ಮಂದಿ ಗಾಯಗೊಂಡಿದ್ದಾರೆ ಎಂದು ಛತ್ತೀಸ್ ಘರ್ ಪೋಲೀಸರು ಹೇಳಿದ್ದಾರೆ. ಇದಲ್ಲದೆ, ಅತ್ತೀಸ್ ಘರ್ ಸುಕ್ಮಾ-ಬಿಜಾಪುರ ಗಡಿಯಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಕ್ಸಲರು ಹಲ್ಲೆ ನಡೆಸಿದ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಗಾಯಗೊಂಡ ಯೋಧರನ್ನು ಶಾ ಆಸ್ಪತ್ರೆಯಲ್ಲಿ ಭೇಟಿಯಾಗಲಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಿಬಿರಗಳನ್ನು ಸ್ಥಾಪಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಪುನರುಚ್ಚರಿಸಿದರು.

"ಯುದ್ಧ" ನಾಲ್ಕು ಗಂಟೆಗಳ ಕಾಲ ಮುಂದುವರಿಯಿತು ಮತ್ತು ಭದ್ರತಾ ಪಡೆಗಳು ನಕ್ಸಲ್ ಪೀಡಿತ ಪ್ರದೇಶಗಳನ್ನು ಪ್ರವೇಶಿಸಿ ಶೌರ್ಯದಿಂದ ಹೋರಾಡಿದವು ಎಂದು ಅವರು ಹೇಳಿದರು. ರಾಜ್ಯದಲ್ಲಿ ನಕ್ಸಲರ ಪ್ರಭಾವ ವೇಗವಾಗಿ ಕುಗ್ಗುತ್ತಿದೆ, ಮತ್ತು ಈಗ ರಾಜ್ಯದ ಅತ್ಯಂತ ಸೀಮಿತ ಪ್ರದೇಶಕ್ಕೆ ನಕ್ಸಲರ ಚಳುವಳಿ ಸೀಮಿತವಾಗಿದೆ. ಅವರು ಭೀತಿಗೊಳಲಾಗಿದ್ದಾರೆ.ಇಂತಹ ಹಿಂಸಾತ್ಮಕ ಘಟನೆಗಳ ಮೂಲಕ ತಮ್ಮ ಅಸ್ತಿತ್ವವನ್ನು ಸಾರಲು ಪ್ರಯತ್ನಿಸುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಕ್ಯಾಂಪ್‌ಗಳನ್ನು ಸ್ಥಾಪಿಸಲು ನಿರಂತರ ಕಾರ್ಯಗಳು ನಡೆಯುತ್ತಿದ್ದು, ಭವಿಷ್ಯದಲ್ಲಿಯೂ ಈ ಕಾರ್ಯ ಮುಂದುವರಿಯಲಿದೆ ಎಂದರು. ದಾಳಿಯ ನಂತರದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಛತ್ತೀಸ್ ಘರ್ ನಲ್ಲಿರುವ ಸಿಆರ್‌ಪಿಎಫ್ ಡಿಜಿ ಕುಲದೀಪ್ ಸಿಂಗ್, ಕಾರ್ಯಾಚರಣೆಯಲ್ಲಿ ಯಾವುದೇ ಗುಪ್ತಚರ ಅಥವಾ ಕಾರ್ಯಾಚರಣೆಯ ವೈಫಲ್ಯ ಇಲ್ಲ ಎಂದು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp