ಕೋವಿಡ್-19: ದೇಶದಲ್ಲಿ ದೈನಂದಿನ ಪ್ರಕರಣಗಳು ಕೇವಲ 25 ದಿನಗಳಲ್ಲಿ 20 ಸಾವಿರದಿಂದ 1 ಲಕ್ಷಕ್ಕೆ ಏರಿಕೆ!

ದೇಶದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳು ಕೇವಲ 25 ದಿನಗಳಲ್ಲಿ 2 0 ಸಾವಿರ ಸೋಂಕುಗಳಿಂದ ಒಂದು ಲಕ್ಷದ ಮೈಲಿಗಲ್ಲನ್ನು ದಾಟಿದೆ. ಕಳೆದ ವರ್ಷ ಸೆಪ್ಟೆಂಬರ್ 17 ರಂದು 76 ದಿನಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ  97 ಸಾವಿರದ 894ಕ್ಕೆ ತಲುಪಿತ್ತು. ಇದು ಸೋಂಕು ಹರಡುವಿಕೆಯನ್ನು ಪ್ರತಿಬಿಂಬಿಸುತ್ತಿದೆ.

Published: 05th April 2021 03:17 PM  |   Last Updated: 05th April 2021 03:19 PM   |  A+A-


Casual_images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ದೇಶದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳು ಕೇವಲ 25 ದಿನಗಳಲ್ಲಿ 2 0 ಸಾವಿರ ಸೋಂಕುಗಳಿಂದ ಒಂದು ಲಕ್ಷದ ಮೈಲಿಗಲ್ಲನ್ನು ದಾಟಿದೆ. ಕಳೆದ ವರ್ಷ ಸೆಪ್ಟೆಂಬರ್ 17 ರಂದು 76 ದಿನಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ  97 ಸಾವಿರದ 894ಕ್ಕೆ ತಲುಪಿತ್ತು. ಇದು ಸೋಂಕು ಹರಡುವಿಕೆಯನ್ನು ಪ್ರತಿಬಿಂಬಿಸುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ನೀಡಿರುವ ಮಾಹಿತಿ ಪ್ರಕಾರ, ಒಂದೇ ದಿನ ಸಾರ್ವ ಕಾಲಿಕ ಹೆಚ್ಚಳವಾಗಿದ್ದು, 1,03,558 ಹೊಸ ಕೋವಿಡ್ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಈ ಮೂಲಕ ದೇಶಾದ್ಯಂತ ಒಟ್ಟಾರೇ ಸೋಂಕಿತರ ಸಂಖ್ಯೆ 1,25, 89, 067ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 57,074( ಶೇ.55.11) ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ. ಛತ್ತೀಸ್ ಗಢದಲ್ಲಿ 5,250, ಕರ್ನಾಟಕದಲ್ಲಿ 4, 553 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ, ಉತ್ತರ ಪ್ರದೇಶ , ದೆಹಲಿ, ತಮಿಳುಾಡು, ಮಧ್ಯಪ್ರದೇಶ ಮತ್ತು ಪಂಜಾಬ್ ಸೇರಿದಂತೆ 8 ರಾಜ್ಯಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಶೇ.81.90 ರಷ್ಟು ಹೆಚ್ಚಳವಾಗಿದೆ. ಡಿಸೆಂಬರ್ 14ರಿಂದಲೂ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ 30 ಸಾವಿರಕ್ಕಿಂತಲೂ ಕಡಿಮೆ ಇತ್ತು. ಈ ವರ್ಷ ಫೆಬ್ರವರಿ 2 ರಂದು 8,635 ಸೋಂಕು ಪ್ರಕರಣಗಳಲ್ಲಿ  ಕಂಡುಬಂದಿದ್ದವು. ದೇಶಾದ್ಯಂತ ಒಟ್ಟಾರೇ ಸಕ್ರಿಯ ಪ್ರಕರಣಗಳ ಸಂಖ್ಯೆ 7,41,830ಕ್ಕೆ ತಲುಪಿವೆ.  ಒಟ್ಟಾರೇ ಸೋಂಕಿನ ಪ್ರಕರಣ ಶೇ.89 ರಷ್ಟಿದ್ದು, ಚೇತರಿಕೆ ಪ್ರಮಾಣ ಶೇ.92. 80ರಷ್ಟಿದೆ. 

ದೇಶದಲ್ಲಿನ ಒಟ್ಟಾರೇ ಶೇ. 75.88 ಸಕ್ರಿಯ ಪ್ರಕರಣಗಳಿಗೆ ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್ ಗಢ,  ಕೇರಳ ಮತ್ತು ಪಂಜಾಬ್‌ಗಳಲ್ಲಿ ಪ್ರಮುಖ ಕಾರಣವಾಗಿವೆ. ದೇಶದ ಒಟ್ಟಾರೇ ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ ಒಂದರಿಂದಲೇ ಶೇ.58. 23 ರಷ್ಟಿದೆ. ದೇಶದ ಕೋವಿಡ್-19  ಮೊತ್ತವು  ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp