ಅನಿಲ್ ದೇಶಮುಖ್ ರಾಜೀನಾಮೆ: ಮಹಾರಾಷ್ಟ್ರದ ನೂತನ ಗೃಹ ಸಚಿವರಾಗಿ ದಿಲೀಪ್ ವಾಲ್ಸೆ ಪಾಟೀಲ್ ನೇಮಕ

ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶಮುಖ್ ರಾಜೀನಾಮೆ ನೀಡಿದ ನಂತರ ಎನ್‌ಸಿಪಿಯಿಂದ ಆರು ಬಾರಿ ಶಾಸಕರಾಗಿದ್ದ ದಿಲೀಪ್ ವಾಲ್ಸೆ ಪಾಟೀಲ್ ನೂತನ ಗೃಹ ಸಚಿವರಾಗಿ ನೇಮಕವಾಗಲಿದ್ದಾರೆ. 

Published: 05th April 2021 08:07 PM  |   Last Updated: 05th April 2021 08:07 PM   |  A+A-


ದಿಲೀಪ್ ವಾಲ್ಸೆ ಪಾಟೀಲ್

Posted By : Raghavendra Adiga
Source : PTI

ಮುಂಬೈ: ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶಮುಖ್ ರಾಜೀನಾಮೆ ನೀಡಿದ ನಂತರ ಎನ್‌ಸಿಪಿಯಿಂದ ಆರು ಬಾರಿ ಶಾಸಕರಾಗಿದ್ದ ದಿಲೀಪ್ ವಾಲ್ಸೆ ಪಾಟೀಲ್ ನೂತನ ಗೃಹ ಸಚಿವರಾಗಿ ನೇಮಕವಾಗಲಿದ್ದಾರೆ. 

ಈ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದು ದೇಶಮುಖ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಮತ್ತು ಪಾಟೀಲ್ ಅವರನ್ನು ಹೊಸ ಗೃಹ ಸಚಿವರನ್ನಾಗಿ ನೇಮಿಸುವಂತೆ ತಾವು ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ ಎಂದರು.

ದಿಲೀಪ್ ವಾಲ್ಸೆ ಪಾಟೀಲ್ ಪ್ರಸ್ತುತ ರಾಜ್ಯದ ಕಾರ್ಮಿಕ ಮತ್ತು ಅಬಕಾರಿ ಸಚಿವರಾಗಿದ್ದಾರೆ.

ಈಗಾಗಲೇ ರಾಜ್ಯ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಅಬಕಾರಿ ಸಚಿವ ಖಾತೆ ನೀಡಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿದೆ.ಆದಾಗ್ಯೂ, ಕಾರ್ಮಿಕ ಸಚಿವಾಲಯದ ಖಾತೆಯನ್ನು ಹಸನ್ ಮುಶ್ರಿಫ್ ಅವರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp