ನೌಕಾಪಡೆಯ ಹಡಗುಗಳನ್ನು ಶತ್ರು ಕ್ಷಿಪಣಿಗಳಿಂದ ರಕ್ಷಿಸಲು ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್ಡಿಒ
ಭಾರತೀಯ ನೌಕಾಪಡೆಯ ಹಡಗುಗಳನ್ನು ಶತ್ರು ಕ್ಷಿಪಣಿ ದಾಳಿಯಿಂದ ರಕ್ಷಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಸುಧಾರಿತ ಚಾಫ್ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ.
Published: 05th April 2021 03:12 PM | Last Updated: 05th April 2021 03:12 PM | A+A A-

ಲಾಂಗ್ ರೇಂಜ್ ಚಾಫ್ ರಾಕೆಟ್
ಭುವನೇಶ್ವರ: ಭಾರತೀಯ ನೌಕಾಪಡೆಯ ಹಡಗುಗಳನ್ನು ಶತ್ರು ಕ್ಷಿಪಣಿ ದಾಳಿಯಿಂದ ರಕ್ಷಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಸುಧಾರಿತ ಚಾಫ್ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ.
ಡಿಆರ್ಡಿಒ ಘಟಕದ ಜೋಧ್ಪುರ ಡಿಫೆನ್ಸ್ ಲ್ಯಾಬೊರೇಟರಿ(ಡಿಎಲ್ಜೆ) ಈ ನಿರ್ಣಾಯಕ ತಂತ್ರಜ್ಞಾನದ ಮೂರು ರೂಪಾಂತರಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ - ಲಾಂಗ್ ರೇಂಜ್ ಚಾಫ್ ರಾಕೆಟ್(ಎಲ್ಆರ್ಸಿಆರ್), ಮಧ್ಯಮ ಶ್ರೇಣಿ ಚಾಫ್ ರಾಕೆಟ್(ಎಂಆರ್ಸಿಆರ್) ಮತ್ತು ಶಾರ್ಟ್ ರೇಂಜ್ ಚಾಫ್ ರಾಕೆಟ್ (ಎಸ್ಆರ್ಸಿಆರ್)ಗಳು ಭಾರತೀಯ ನೌಕಾಪಡೆಯ ಅಗತ್ಯಗಳನ್ನು ಪುರೈಸಲಿವೆ.
ಭಾರತೀಯ ನೌಕಾಪಡೆ ಇತ್ತೀಚೆಗೆ ಅರೇಬಿಯನ್ ಸಮುದ್ರದಲ್ಲಿ ಎಲ್ಲಾ ಮೂರು ರಾಕೆಟ್ ಗಳ ಪ್ರಾಯೋಗಿಕ ಪರೀಕ್ಷೆ ನಡೆಸಿತು ಮತ್ತು ಅವುಗಳ ಕಾರ್ಯಕ್ಷಮತೆ ತೃಪ್ತಿಕರವಾಗಿದೆ.
ನೌಕಾ ಹಡಗುಗಳನ್ನು ಶತ್ರುಗಳ ರೇಡಾರ್ ಮತ್ತು ರೇಡಿಯೊ ಫ್ರೀಕ್ವೆನ್ಸಿ ಕ್ಷಿಪಣಿ ಅನ್ವೇಷಕರಿಂದ ರಕ್ಷಿಸಲು ಚಾಫ್ ವಿಶ್ವಾದ್ಯಂತ ಬಳಸಲಾಗುವ ನಿಷ್ಕ್ರಿಯ ಮಾಡಬಹುದಾದ ಎಲೆಕ್ಟ್ರಾನಿಕ್ ಕೌಂಟರ್ಮೆಶರ್ ತಂತ್ರಜ್ಞಾನವಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.