ಗೀತಾ ಪ್ರೆಸ್ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ನಿಧನ, ಪ್ರಧಾನಿ ಮೋದಿ ಸಂತಾಪ

ಗೀತಾ ಪ್ರೆಸ್‌ನ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ಅಲ್ಪಾವಧಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

Published: 05th April 2021 12:10 AM  |   Last Updated: 05th April 2021 12:10 AM   |  A+A-


ರಾಧೇಶ್ಯಾಮ್ ಖೇಮ್ಕಾ

Posted By : Raghavendra Adiga
Source : PTI

ಗೋರಖ್‌ಪುರ: ಗೀತಾ ಪ್ರೆಸ್‌ನ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ಅಲ್ಪಾವಧಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ರಾಧೇಶ್ಯಾಮ್ ಖೇಮ್ಕಾ ಶನಿವಾರ ಮಧ್ಯಾಹ್ನ ನಿಧನರಾದರೆಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಮೃತರ ಅಂತಿಮ ವಿಧಿಗಳನ್ನು ಹರಿಶ್ಚಂದ್ರ ಘಾಟ್‌ನಲ್ಲಿ ನಡೆಸಲಾಯಿತು.

ಖೇಮ್ಕಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಅವರು ತಮ್ಮ ಜೀವನದುದ್ದಕ್ಕೂ ವಿವಿಧ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಖೇಮ್ಕಾ ಸನಾತನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಿದ್ದಾರೆ ಎಂದರು.

38 ವರ್ಷಗಳ ಕಾಲ ಖೇಮ್ಕಾ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತಿದ್ದ 'ಕಲ್ಯಾಣ್' ಪತ್ರಿಕೆಯ ಸಂಪಾದಕರಾಗಿದ್ದರು. ಒಟ್ಟಾರೆಯಾಗಿ, ಖೇಮ್ಕಾ ನಿಯತಕಾಲಿಕದ 38 ವಾರ್ಷಿಕ ವಿಶೇಷ ಸಂಚಿಕೆಗಳ ಮತ್ತು 'ಕಲ್ಯಾಣ್' ನ 460 ಸಾಮಾನ್ಯ ಸಂಚಿಕೆಗಳ ಸಂಪಾದಕರಾಗಿದ್ದರು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp