ಒಂದು ಕಾಲಿನಲ್ಲಿ ಬಂಗಾಳ, ಎರಡು ಕಾಲಿನಲ್ಲಿ ದೆಹಲಿ ಗೆಲ್ಲುತ್ತೇನೆ: ಮೋದಿಗೆ ದೀದಿ ಟಕ್ಕರ್

ಗಾಯದ ಹೊರತಾಗಿಯೂ ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮುಂದಿನ ದಿನಗಳಲ್ಲಿ...

Published: 05th April 2021 05:08 PM  |   Last Updated: 05th April 2021 05:08 PM   |  A+A-


Mamata Banerjee

ಮಮತಾ ಬ್ಯಾನರ್ಜಿ

Posted By : Lingaraj Badiger
Source : PTI

ಚುಂಚುರಾ: ಗಾಯದ ಹೊರತಾಗಿಯೂ ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮುಂದಿನ ದಿನಗಳಲ್ಲಿ ದೆಹಲಿಯಲ್ಲೂ ಅಧಿಕಾರಕ್ಕೆ ಬರುವುದಾಗಿ ಸೋಮವಾರ ಗುಡುಗಿದ್ದಾರೆ.

ಇಂದು ಹೂಗ್ಲಿಯಲ್ಲಿ ಟಿಎಂಸಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನಾನು ಒಂದು ಕಾಲಿನಲ್ಲಿ ಪಶ್ಚಿಮ ಬಂಗಾಳವನ್ನು ಗೆಲ್ಲುತ್ತೇನೆ. ಎರಡು ಕಾಲಿನ ಸಹಾಯದಿಂದ ದೆಹಲಿಯಲ್ಲೂ ವಿಜಯ ಸಾಧಿಸುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಟಕ್ಕರ್ ನೀಡಿದ್ದಾರೆ.

ತಮ್ಮ ಕಾಲಿಗೆ ಗಾಯವಾಗಿರುವ ವಿಚಾರ ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ, ಸದ್ಯಕ್ಕೆ ನಾನು ಒಂದು ಕಾಲನ್ನು ಬಳಸುವಂತಿಲ್ಲ. ಆದರೆ ಇರುವ ಒಂದೇ ಕಾಲಿನಲ್ಲಿ ಪಶ್ವಿಮ ಬಂಗಾಳವನ್ನು ಗೆಲ್ಲುತ್ತೇನೆ ಮತ್ತು ಕೆಲ ದಿನಗಳ ಬಳಿಕ ನನ್ನ ಎರಡೂ ಕಾಲುಗಳು ಸರಿಯಾಗುತ್ತವೆ. ಆಗ ದೆಹಲಿ ಮೇಲೆ ದಂಡಯಾತ್ರೆ ಕೈಗೊಳ್ಳುವುದಾಗಿ, 2024ರ ಲೋಕಸಭಾ ಚುನಾವಣೆಯ ಕುರಿತು ಮಮತಾ ಪರೋಕ್ಷವಾಗಿ ಪ್ರಸ್ತಾಪಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೀದಿ, ಪಶ್ಚಿಮ ಬಂಗಾಳವನ್ನು ಇಲ್ಲಿಯ ಜನರೇ ಆಳುತ್ತಾರೆ. ನಾನು ರಾಯಲ್ ಬಂಗಾಳ ಹುಲಿ, ಗುಜರಾತಿಗಳಿಗೆ ಪಶ್ಚಿಮ ಬಂಗಾಳವನ್ನು ಆಳಲು ಅವಕಾಶ ನೀಡುವುದಿಲ್ಲ ಎಂದರು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp