'ಅಂಧಭಕ್ತರು ಮತ್ತು ಗಂಧಭಕ್ತರು': ಸುಬ್ರಮಣಿಯನ್ ಸ್ವಾಮಿ ಟ್ವೀಟ್ನಿಂದ ಬಿಜೆಪಿಗೆ ತೀವ್ರ ಮುಜುಗರ!
ದೇಶದಲ್ಲಿ ಕೊರೋನಾ ಸೋಂಕು ದಿನಕ್ಕೆ ಲಕ್ಷ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ನಿರ್ವಹಣೆ ವಿಚಾರವಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
Published: 05th April 2021 01:40 PM | Last Updated: 05th April 2021 01:40 PM | A+A A-

ಮೋದಿ-ಸ್ವಾಮಿ
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ದಿನಕ್ಕೆ ಲಕ್ಷ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ನಿರ್ವಹಣೆ ವಿಚಾರವಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಕಳೆದ ವರ್ಷದ ಏಪ್ರಿಲ್ ಮಧ್ಯದಲ್ಲಿ ಕೊರೋನಾ ವೈರಸ್ ದಿನಕ್ಕೆ 1 ಲಕ್ಷದಷ್ಟು ವರದಿಯಾಗಿತ್ತು. ನವೆಂಬರ್ ವೇಳೆಗೆ 10 ಸಾವಿರಕ್ಕೆ ಇಳಿಯಿತು. ಅಂದು ಅಂಧಭಕ್ತರು ಮತ್ತು ಗಂಧ(ಕೊಳಕು) ಭಕ್ತರು ಅದರ ಮನ್ನಣೆ ಯಾರಿಗೆ ನೀಡಿದ್ದರು? ಈಗ ಪ್ರಕರಣಗಳು ಮತ್ತೆ ಲಕ್ಷಕ್ಕೆ ಏರಿಕೆಯಾಗಿದೆ. ಈಗ ಯಾರು ಕ್ರೆಡಿಟ್ ಪಡೆಯುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಸ್ವಾಮಿಯ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಟ್ವೀಟ್ ಗೆ ಪರ-ವಿರೋಧ ಕಮೆಂಟ್ ಗಳು ಬರುತ್ತಿವೆ.
When the Coronavirus Pandemic cases were running at 100,000 daily mid April 2020 and fell to 10, 000 by November. who was given the credit by Andhbhakts and Gandhbahkts ? Now have the cases risen again to 100, 000 again? Then who will now claim credit?
— Subramanian Swamy (@Swamy39) April 4, 2021
ಕಳೆದ 15 ದಿನಗಳಿಂದ ದೇಶದಲ್ಲಿ ಕೊರೋನ ಮತ್ತೆ ಆರ್ಭಟಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1 ಲಕ್ಷದ 03 ಸಾವಿರದ 558 ಹೊಸ ಕೊರೋನಾ ಪ್ರಕರಣ ವರದಿಯಾಗಿದೆ. ಒಂದೇ ದಿನ 478 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 1 ಲಕ್ಷದ 65 ಸಾವಿರದ 101ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 17ರ ನಂತರ ಒಂದು ದಿನದಲ್ಲಿ ಅತಿ ಹೆಚ್ಚು ಮಂದಿ ಸೋಂಕಿತರು ವರದಿಯಾಗಿದ್ದು ನಿನ್ನೆಯೇ ಆಗಿದೆ.