ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಿಬಿಎಸ್ ಇ 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ನಕಲಿ: ಮಂಡಳಿ ಸ್ಪಷ್ಟನೆ
10 ಮತ್ತು 12ನೇ ತರಗತಿ ಸಿಬಿಎಸ್ ಇ ನಕಲಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Published: 05th April 2021 09:34 AM | Last Updated: 05th April 2021 01:02 PM | A+A A-

ಸಾಂದರ್ಭಿಕ ಚಿತ್ರ
ಚೆನ್ನೈ: 10 ಮತ್ತು 12ನೇ ತರಗತಿ ಸಿಬಿಎಸ್ ಇ ನಕಲಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಎಸ್ ಇ, ನಿಗದಿಯಂತೆ ಮೇ 4ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿ ಕಳೆದ ವರ್ಷ ಪರೀಕ್ಷಾ ವೇಳಾಪಟ್ಟಿಗೆ ಸಂಬಂಧಪಟ್ಟಂತೆ ಹೊರಡಿಸಿದ ಸುತ್ತೋಲೆಯಾಗಿದೆ. ಈ ನಕಲಿ, ಸುಳ್ಳು ವೇಳಾಪಟ್ಟಿಯನ್ನು ವಿದ್ಯಾರ್ಥಿಗಳು ಪರಿಗಣಿಸಬೇಡಿ ಎಂದು ಸಿಬಿಎಸ್ ಇ ಸ್ಪಷ್ಟನೆ ನೀಡಿದೆ.
ಸಿಬಿಎಸ್ ಇ 10 ಮತ್ತು 12ನೇ ತರಗತಿ ಪರೀಕ್ಷೆ ಬಗ್ಗೆ ಕಳೆದ ವರ್ಷದ ವೇಳಾಪಟ್ಟಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸಿ ಕೆಲವರು ಗೊಂದಲ ಸೃಷ್ಟಿಸಲು ನೋಡುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇದನ್ನು ನಂಬಬೇಡಿ. ಮಂಡಳಿಯಿಂದ ಯಾವುದೇ ಇಂತಹ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ ಎಂದು ಸಿಬಿಎಸ್ ಇ ಸ್ಪಷ್ಟನೆ ನೀಡಿದೆ.
ನಕಲಿ ವೇಳಾಪಟ್ಟಿಯಲ್ಲಿ 12 ಮತ್ತು 10ನೇ ತರಗತಿಗೆ ವಾರ್ಷಿಕ ಪರೀಕ್ಷೆ ಜುಲೈ 11 ಮತ್ತು 13 ಎಂದು ಇದೆ. ಫಲಿತಾಂಶ ಜುಲೈ 15ರಂದು ಪ್ರಕಟವಾಗುವ ನಿರೀಕ್ಷೆಯಿದೆ.
There are some persons deliberately trying to create confusion about board exams by circulating old news of 1.4.20 regarding Xand XII exams . students should ignore this old circular of last year and not be misled . pic.twitter.com/EuAmgZYwf6
— CBSE HQ (@cbseindia29) April 2, 2021