ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಪ್ರಬಲ ಭೂಕಂಪನ: ರಿಕ್ಟಪ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲು, ಪ್ರಧಾನಿ ಮೋದಿ ಪರಿಸ್ಥಿತಿ ಅವಲೋಕನ

ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಅಸ್ಸಾಂನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ  5.4ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

Published: 06th April 2021 08:02 AM  |   Last Updated: 06th April 2021 01:08 PM   |  A+A-


Earthquake Creates Fear In KR Pet Villagers

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : PTI

ನವದೆಹಲಿ: ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಅಸ್ಸಾಂನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಸಿಕ್ಕಿಂನಲ್ಲಿ ಸೋಮವಾರ ರಾತ್ರಿ ರಿಕ್ಟರ್‌ ಮಾಪಕದಲ್ಲಿ 5.4ರಷ್ಟಿದ್ದ ಭೂಕಂಪ ಸಂಭವಿಸಿದೆ. ರಾತ್ರಿ 8.49ಕ್ಕೆ ಸಂಭವಿಸಿದ ಈ ಕಂಪನದ ಕೇಂದ್ರಬಿಂದು ಭಾರತ–ಭೂತಾನ್‌ ಗಡಿ ಭಾಗದಲ್ಲಿ 10 ಕಿ.ಮೀ.ಆಳದಲ್ಲಿತ್ತು ಎಂದು ಭೂಕಂಪನ ಮಾಪನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳಲ್ಲೂ ಕಂಪನದ ಅನುಭವವಾಗಿದ್ದು, ಪಶ್ಚಿಮ ಬಂಗಾಳ, ಡಾರ್ಜಿಲಿಂಗ್, ಧುಪ್ಗುರಿ (ಜಲ್ಪೈಗುರಿ), ಸಿಲಿಗುರಿ, ಕೂಚ್‌ಬೆಹಾರ್, ರಾಯ್ ಗಂಜ್ (ಉತ್ತರ ದಿನಾಜ್‌ಪುರ), ಮತ್ತು ಪೂರ್ಣಿಯಾ ಮತ್ತು ಬಿಹಾರದ ಹಲವಾರು ಭಾಗಗಳಲ್ಲಿಯೂ ಕಂಪನ ಉಂಟಾಗಿದೆ ಎಂದು ಎನ್‌ಸಿಎಸ್ ಅಧಿಕಾರಿ ತಿಳಿಸಿದ್ದಾರೆ. 

ಕಂಪನದ ತೀವ್ರತೆಗೆ ಜನ ಗಾಬರಿಗೊಂಡು ಹೊರಗೆ ಓಡಿ ಬಂದ ಘಟನೆ ಸಾಮಾನ್ಯವಾಗಿತ್ತು. ಆದರೆ ಯಾವುದೇ ಸಾವು, ನೋವಿನ ವರದಿಯಾಗಿಲ್ಲ. 

ಪ್ರಸ್ತುತ ಭೂಕಂಪನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದಾರೆ. ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿ ಭೂಕಂಪನದ ಮಾಹಿತಿ ಪಡೆದರು. ರಾಜ್ಯದ ವಿಪತ್ತು ನಿರ್ವಹಣಾ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಸಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಮಂತ್ರಿಗೆ ಮಾಹಿತಿ ನೀಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದಲ್ಲೂ ಕಂಪನ
ಭಾರತ ಮಾತ್ರವಲ್ಲದೇ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದಲ್ಲೂ ಕಂಪನದ ಅನುಭವವಾಗಿದೆ. ಆದರೆ ಕಂಪನದಿಂದಾಗಿ ಉಂಟಾದ ಸಾವು-ನೋವುಗಳ ಕುರಿತು ವರದಿಯಾಗಿಲ್ಲ. ಭೂತಾನ್ ನಲ್ಲಿ ಸುಮಾರು 5 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp