ವಿಧಾನಸಭೆ ಚುನಾವಣೆ: ಕೇರಳ 73.58%, ತ.ನಾಡು 65.11%, ಅಸ್ಸಾಂ 82.29%, ಪುದುಚೇರಿ 78.13% ಮತ್ತು ಪ.ಬಂಗಾಳದಲ್ಲಿ 77.38% ಮತದಾನ
ಕೇರಳ, ಪುದುಚೇರಿ ತಮಿಳುನಾಡು ವಿಧಾನಸಭೆಗೆ ಇಂದು ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ. ಹಾಗೇಯೇ ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆ ಹಂತದ ಮತದಾನ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಸಹ ಯಶಸ್ವಿಯಾಗಿದೆ.
Published: 06th April 2021 09:44 PM | Last Updated: 06th April 2021 09:44 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಕೇರಳ, ಪುದುಚೇರಿ ತಮಿಳುನಾಡು ವಿಧಾನಸಭೆಗೆ ಇಂದು ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ. ಹಾಗೇಯೇ ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆ ಹಂತದ ಮತದಾನ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಸಹ ಯಶಸ್ವಿಯಾಗಿದೆ.
ಸಂಜೆ ಏಳರವರೆಗಿನ ವರದಿಯಂತೆ ಕೇರಳದಲ್ಲಿ 73.58%, ತಮಿಳುನಾಡಿನಲ್ಲಿ 65.11%, ಅಸ್ಸಾಂನಲ್ಲಿ 82.29% ಪುದುಚೇರಿಯಲ್ಲಿ 78.13% ಮತ್ತು ಪಶ್ಚಿಮ ಬಂಗಾಳದಲ್ಲಿ 77.38% ಮತದಾನ ದಾಖಲಾಗಿದೆ.
ಇಂದು ನಡೆದ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.