
ಬಿಜೆಪಿ-ಟಿಎಂಸಿ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ಏ.4 ರಂದು ನಡೆಯುತ್ತಿದ್ದು, ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ.
ಅರಮ್ಬಾಗ್ ನಲ್ಲಿ ಈ ಮತದಾನದ ವೇಳೆ ಈ ಘರ್ಷಣೆ ಸಂಭವಿಸಿದ್ದು, "ಬಿಜೆಪಿ ಗೂಂಡಾಗಳು ದಾಳಿ ಮಾಡಿದ್ದಾರೆ" ಎಂದು ಟಿಎಂಸಿ ಅಭ್ಯರ್ಥಿ ಆರೋಪಿಸಿದ್ದಾರೆ.
ಅರಂದಿ-1 ಪ್ರದೇಶದಲ್ಲಿ ಮಮತಾ ಬ್ಯಾನರ್ಜಿಗೆ ಹೆಚ್ಚು ಬೆಂಬಲ ನೀಡುವ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಯ ಮತದಾರರು ಹೆಚ್ಚಿದ್ದಾರೆ. ಕಳೆದ ರಾತ್ರಿ ಬಿಜೆಪಿ ಗೂಂಡಾಗಳು ಮಹಿಳಾ ಮತದಾರರನ್ನು ಬೆದರಿಸಿ, ಹಿಂಸೆ ನೀಡಿದ್ದಾರೆ ಎಂದು ಟಿಎಂಸಿ ಅಭ್ಯರ್ಥಿ ಸುಜಾತಾ ಮೋಂಡಲ್ ಹೇಳಿದ್ದಾರೆ. ಬೆಳಿಗ್ಗೆ 11:30 ರ ವೇಳೆಗೆ ಶೇ.34.71 ರಷ್ಟು ಮತದಾನ ನಡೆದಿದೆ.