ತೃಣಮೂಲ ಕಾಂಗ್ರೆಸ್ ನಾಯಕನ ಮನೆಯಲ್ಲಿ ಇವಿಎಂ: ಚುನಾವಣಾ ಅಧಿಕಾರಿ ಅಮಾನತು
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ 3 ನೇ ಹಂತದ ಮತದಾನ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್ ನಾಯಕನ ಮನೆಯಲ್ಲಿ ಇವಿಎಂ ಪತ್ತೆಯಾಗಿದ್ದು ಚುನಾವಣಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
Published: 06th April 2021 11:02 AM | Last Updated: 06th April 2021 11:02 AM | A+A A-

ತೃಣಮೂಲ ಕಾಂಗ್ರೆಸ್ ನಾಯಕನ ಮನೆಯಲ್ಲಿ ಇವಿಎಂ: ಚುನಾವಣಾ ಅಧಿಕಾರಿ ಅಮಾನತು
ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ 3 ನೇ ಹಂತದ ಮತದಾನ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್ ನಾಯಕನ ಮನೆಯಲ್ಲಿ ಇವಿಎಂ ಪತ್ತೆಯಾಗಿದ್ದು ಚುನಾವಣಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಹೌರಾ ಜಿಲ್ಲೆಯ ಉತ್ತರ ಉಲುಬೇರಿಯಾದಲ್ಲಿ ಈ ಘಟನೆ ನಡೆದಿದ್ದು, ಗೌತಮ್ ಘೋಷ್ ಎಂಬ ಟಿಎಂಸಿ ನಾಯಕನ ಮನೆಯಲ್ಲಿ ನಾಲ್ಕು ಇವಿಎಂ, ವಿವಿಪಿಎಟಿ ಗಳು ಪತ್ತೆಯಾಗಿದ್ದು, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಕ್ಕೆ ಆಯೋಗದ ಅಧಿಕಾರಿ ತಪನ್ ಸರ್ಕಾರ್ ಅವರನ್ನು ಅಮಾನತುಗೊಳಿಸಲಾಗಿದೆ.
"ಸಂಬಂಧಿಕರ ಮನೆಗೆ ತೆರಳಿದ್ದ ಚುನಾವಣಾ ಅಧಿಕಾರಿ ಅಲ್ಲಿಯೇ ಮಲಗಿದ್ದರು. ಇದು ಚುನಾವಣಾ ಆಯೋಗದ ನಿಯಮಗಳ ಉಲ್ಲಂಘನೆಯಾಗಿದ್ದು, ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟನೆ ನೀಡಿದೆ.
ಅಧಿಕಾರಿ ತನ್ನ ಬಳಿ ಇರಿಸಿಕೊಂಡಿದ್ದ ಇವಿಎಂ ನ್ನು ಚುನಾವಣಾ ಪ್ರಕ್ರಿಯೆಯಿಂದ ತೆಗೆದುಹಾಕಲಾಗಿದೆ, ಚುನಾವಣೆಗೆ ಬಳಕೆ ಮಾಡುವುದಿಲ್ಲ ಎಂದೂ ಆಯೋಗ ಸ್ಪಷ್ಟನೆ ನೀಡಲಾಗಿದೆ.