ಭಾರತದ ದಾಖಲೆ: ದಿನವೊಂದಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ನೀಡಿಕೆ

ಕೋವಿಡ್-19 ಲಸಿಕೆ ನೀಡುವುದರಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ದಿನವೊಂದಕ್ಕೆ ಗರಿಷ್ಠ ಸಂಖ್ಯೆಯ ಲಸಿಕೆ ನೀಡಿರುವ ದಾಖಲೆಯನ್ನು ಸೃಷ್ಟಿಸಿದೆ. 

Published: 06th April 2021 02:07 PM  |   Last Updated: 06th April 2021 02:07 PM   |  A+A-


Covid-10 Vaccine

ಕೋವಿಡ್-19 ಲಸಿಕೆ

Posted By : Srinivas Rao BV
Source : PTI

ನವದೆಹಲಿ: ಕೋವಿಡ್-19 ಲಸಿಕೆ ನೀಡುವುದರಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ದಿನವೊಂದಕ್ಕೆ ಗರಿಷ್ಠ ಸಂಖ್ಯೆಯ ಲಸಿಕೆ ನೀಡಿರುವ ದಾಖಲೆಯನ್ನು ಸೃಷ್ಟಿಸಿದೆ. 

24 ಗಂಟೆಗಳಲ್ಲಿ 43 ಲಕ್ಷ ಕೋವಿಡ್-19 ಲಸಿಕೆಯನ್ನು ನೀಡಲಾಗಿದ್ದು, ದೇಶಾದ್ಯಂತ ಒಟ್ಟು 8,31,10,926 ಕೋವಿಡ್-19 ಲಸಿಕೆಯನ್ನು ಈ ವರೆಗೂ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.

ಒಂದೇ ದಿನ 43,00,966 ಮಂದಿಗೆ ಲಸಿಕೆ ನೀಡಿದ್ದು, ಈ ಪೈಕಿ 3 9,00,505  ಮಂದಿ ಮೊದಲ ಬಾರಿ ಲಸಿಕೆ ಪಡೆದಿದ್ದರೆ, 4,00,461  ಮಂದಿ 2 ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ, ಕೇರಳಗಳಲ್ಲಿ 60% ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp