ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಾಗಲು ವಲಸಿಗರೇ ಹೊಣೆ: ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ

ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕು ಪ್ರಸರಣ ಹೆಚ್ಚಾಗುವುದಕ್ಕೆ ವಲಸಿಗ ಕಾರ್ಮಿಕರೇ ಕಾರಣ ಎಂದು ಎಂಎನ್ಎಸ್ ನ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

Published: 06th April 2021 07:54 PM  |   Last Updated: 06th April 2021 07:54 PM   |  A+A-


Migrants responsible for spread of coronavirus in Maharashtra, says MNS chief Raj Thackeray

ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಾಗಲು ವಲಸಿಗರೇ ಹೊಣೆ: ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ

Posted By : Srinivas Rao BV
Source : The New Indian Express

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕು ಪ್ರಸರಣ ಹೆಚ್ಚಾಗುವುದಕ್ಕೆ ವಲಸಿಗ ಕಾರ್ಮಿಕರೇ ಕಾರಣ ಎಂದು ಎಂಎನ್ಎಸ್ ನ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ವಲಸಿಗ ಕಾರ್ಮಿಕರ ಮೂಲವಾಗಿರುವ ರಾಜ್ಯಗಳು  ಕೋವಿಡ್-19 ಪರೀಕ್ಷೆ ಮಾಡಿಸಲು ಸೌಲಭ್ಯಗಳನ್ನು ಕಡಿಮೆ ಹೊಂದಿವೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರ ಅತ್ಯಂತ ಹೆಚ್ಚು ಕೈಗಾರೀಕರಣಗೊಂಡಿರುವ ರಾಜ್ಯವಾಗಿದ್ದು, ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಆಕರ್ಷಿಸುತ್ತಿದೆ. ಜನರು ಎಲ್ಲಿಂದ ಇಲ್ಲಿಗೆ ಬರುತ್ತಾರೋ ಅಲ್ಲಿ ಕೋವಿಡ್-19 ಪರೀಕ್ಷೆ ಸೌಲಭ್ಯಗಳು ಕಡಿಮೆ ಇವೆ. "ತಮ್ಮ ಊರುಗಳಿಗೆ ತೆರಳಿರುವ ವಲಸಿಗ ಕಾರ್ಮಿಕರಿಗೆ ಕೋವಿಡ್-19 ಪರೀಕ್ಷೆ ಮಾಡಿಸಬೇಕೆಂದು ಕಳೆದ ವರ್ಷ ಹೇಳಿದ್ದೆ. ಆದರೆ ಅದನ್ನು ಮಾಡಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಅವರೊಂದಿಗಿನ ವರ್ಚ್ಯುಯಲ್ ಸಂವಾದದ ಬಳಿಕ ರಾಜ್ ಠಾಕ್ರೆ ಹೇಳಿದ್ದಾರೆ. 

ಕ್ರೀಡಾಪಟುಗಳು, ಜಿಮ್ ಗಳಲ್ಲಿ ಅಭ್ಯಾಸ ಸೆಷನ್ ಗಳನ್ನು ಪ್ರಾರಂಭಿಸುವಂತೆ ಸಂವಾದದಲ್ಲಿ ಸಿಎಂ ಉದ್ಧವ್ ಠಾಕ್ರೆ ಅವರನ್ನು ಕೇಳಿರುವುದಾಗಿ ರಾಜ್ ಠಾಕ್ರೆ ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp