'ನಕ್ಸಲ್ ಅಂಕಲ್' ನನ್ನ ತಂದೆಯನ್ನು ಬಿಟ್ಟುಬಿಡಿ ಪ್ಲೀಸ್: ಅಪ್ಪನಿಗಾಗಿ ಕಣ್ಣೀರು ಹಾಕಿದ ಪುತ್ರಿ; ಮನಕಲಕುವ ವಿಡಿಯೋ!

ಸಿಆರ್ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಮನ್ಹಾ ನಾಪತ್ತೆಯಾಗಿದ್ದು ಅವರು ನಕ್ಸಲರ ಸೆರೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ತಂದೆಯನ್ನು ಸುರಕ್ಷಿತವಾಗಿ ಬಿಡುವಂತೆ 7 ವರ್ಷದ ಪುತ್ರಿ ಶ್ರಾಘ್ವಿ ಮನವಿ ಮಾಡಿರುವ ವಿಡಿಯೋ ಮನಕಲಕುವಂತಿದೆ. 

Published: 06th April 2021 03:36 PM  |   Last Updated: 06th April 2021 04:42 PM   |  A+A-


Shragvi

ಶ್ರಾಘ್ವಿ

Posted By : Vishwanath S
Source : Online Desk

ಛತ್ತೀಸಗಢ: ಸುಕ್ಮಾದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು 31 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ ಸಿಆರ್ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಮನ್ಹಾ ನಾಪತ್ತೆಯಾಗಿದ್ದು ಅವರು ನಕ್ಸಲರ ಸೆರೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ತಂದೆಯನ್ನು ಸುರಕ್ಷಿತವಾಗಿ ಬಿಡುವಂತೆ 7 ವರ್ಷದ ಪುತ್ರಿ ಶ್ರಾಘ್ವಿ ಮನವಿ ಮಾಡಿರುವ ವಿಡಿಯೋ ಮನಕಲಕುವಂತಿದೆ. 

ಇದೇ ವೇಳೆ ರಾಕೇಶ್ವರ್ ಸಿಂಗ್ ಮನ್ಹಾ ಪತ್ನಿ ತಮ್ಮ ಪತಿಯನ್ನು ಬಿಡಿಸಿಕೊಡುವಂತೆ ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. 

ವಿಡಿಯೋದಲ್ಲಿ ರಾಘವಿ, ನನ್ನ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಪ್ಪನೆಂದರೆ ನನಗೆ ತುಂಬಾ ಪ್ರೀತಿ. ನಕ್ಸಲ್ ಅಂಕಲ್ ದಯವಿಟ್ಟು ನನ್ನ ತಂದೆಯನ್ನು ಬಿಟ್ಟುಬಿಡಿ ಎಂದು ಕಣ್ಣೀರಿಟ್ಟಿದ್ದಾಳೆ. 

ಛತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶವಾಗಿರುವ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜೋನಾಗುಡದಲ್ಲಿ ನಕ್ಸಲರು ದಾಳಿ ನಡೆಸಿದ್ದು 22 ಯೋಧರು ಹುತಾತ್ಮರಾಗಿದ್ದರು. ಇನ್ನು ಅಂದು ಅಲ್ಲಿದ್ದ ರಾಕೇಶ್ವರ್ ಸಿಂಗ್ ಅವರು ಗುಂಡಿನ ದಾಳಿಯ ನಂತರ ನಾಪತ್ತೆಯಾಗಿದ್ದರು. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp