
ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್: ಮುಖಕ್ಕೆ ಮಾಸ್ಕ್ ಧರಿಸದಿರುವುದು ಅಪರಾಧವಾಗುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಹೇಳಿದ್ದಾರೆ.
ಕೊರೋನಾ ವೈರಸ್ ಹರಡುವುದನ್ನು ತಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ರಾಜ್ಯದ ಜನರಿಗೆ ಸಿಎಂ ಮನವಿ ಮಾಡಿದ್ದಾರೆ.
ಚೌಹಾಣ್ ಅವರು ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಂದು 24 ಗಂಟೆಗಳ 'ಧರಣಿ' ಆರಂಭಿಸಿದ್ದು, ಈ ವೇಳೆ ಮಾತನಾಡಿ ಸಿಎಂ ನಿರ್ಲಕ್ಷ್ಯದಿಂದ ಈಗ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ.
ಸಿಎಂ ಚೌಹಾಣ್ ಅವರು ಭೋಪಾಲ್ನ ಮಿಂಟೋ ಹಾಲ್ನಲ್ಲಿ ಮಂಗಳವಾರ ಮಧ್ಯಾಹ್ನ 12.30ರಿಂದ "ಸ್ವಾಸ್ಥ್ಯ ಆಗ್ರಹ" (ಆರೋಗ್ಯ ವಿನಂತಿ)ವನ್ನು ಆರಂಭಿಸಿದ್ದು, 24 ಗಂಟೆಗಳ ಈ 'ಧರಣಿ' ಸಮಯದಲ್ಲಿ ಅವರು ಆನ್ಲೈನ್ನಲ್ಲಿ ಜನರೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಧರಣಿ ಸ್ಥಳದಿಂದಲೇ ತಮ್ಮ ಅಧಿಕೃತ ಕಚೇರಿ ಕಾರ್ಯಗಳನ್ನು ಮಾಡಲಿದ್ದಾರೆ.