ಕಾಮಿಡಿಯನ್ ಕುನಾಲ್ ಕಾಮ್ರಾ, ಕುಟುಂಬಕ್ಕೆ ಕೊರೋನಾ ಪಾಸಿಟಿವ್

ಖ್ಯಾತ ಕಾಮಿಡಿಯನ್ ಕುನಾಲ್ ಕಾಮ್ರಾ ಹಾಗೂ ಅವರ ಕುಟಂಬ ಸದಸ್ಯರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಹೋಮ್ ಕ್ವಾರಂಟೈನ್ ಆಗಿದ್ದಾರೆ.

Published: 06th April 2021 04:00 PM  |   Last Updated: 06th April 2021 04:00 PM   |  A+A-


kunal kamra

ಕುನಾಲ್ ಕಾಮ್ರಾ

Posted By : Lingaraj Badiger
Source : PTI

ಮುಂಬೈ: ಖ್ಯಾತ ಕಾಮಿಡಿಯನ್ ಕುನಾಲ್ ಕಾಮ್ರಾ ಹಾಗೂ ಅವರ ಕುಟಂಬ ಸದಸ್ಯರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಹೋಮ್ ಕ್ವಾರಂಟೈನ್ ಆಗಿದ್ದಾರೆ.

ನನಗೆ ಮತ್ತು ನನ್ನ ಪೋಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ನಾನು ಹೋಮ್ ಕ್ವಾರಂಟೈನ್ ಆಗಿದ್ದೇನೆ. ಪೋಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುನಾಲ್ ಕಾಮ್ರಾ ಅವರು ತಿಳಿಸಿದ್ದಾರೆ.

"ನಾನು ಮತ್ತು ನನ್ನ ಕುಟುಂಬ ಶೀಘ್ರದಲ್ಲೇ ಕೊರೋನಾದಿಂದ ಗುಣಮುಖರಾಗಲಿದ್ದೇವೆ. ದಯವಿಟ್ಟು ಕೊರೋನಾ ಎರಡನೇ ಅಲೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಮತ್ತು ಜಾಗೃತರಾಗಿರಿ" ಎಂದು ಹಾಸ್ಯನಟ ಟ್ವೀಟ್ ಮಾಡಿದ್ದಾರೆ.

ಸೋಮವಾರ ಮುಂಬೈನಲ್ಲಿ 9,857 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ದೇಶದ ವಾಣಿಜ್ಯ ನಗರಿಯ ಸೋಂಕಿತರ ಸಂಖ್ಯೆ 4,62,302ಕ್ಕೆ ಏರಿಕೆಯಾಗಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp