ತಮಿಳುನಾಡು ವಿಧಾನಸಭೆ ಚುನಾವಣೆ: ರಜಿನಿಕಾಂತ್, ಕಮಲ್ ಹಾಸನ್, ಚಿದು ಸೇರಿದಂತೆ ಹಲವು ಖ್ಯಾತನಾಮರಿಂದ ಮತದಾನ

ತಮಿಳುನಾಡು ವಿಧಾನಸಭೆಗೆ ಇಂದು ನಡೆಯುತ್ತಿರುವ ಮತದಾನದಲ್ಲಿ ಭಾರತೀಯ ಚಿತ್ರರಂಗದ ಖ್ಯಾತನಾಮರು ಮತ್ತು ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ್ದ ರಜಿನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Published: 06th April 2021 09:13 AM  |   Last Updated: 06th April 2021 09:13 AM   |  A+A-


TN polls-voting

ಮತದಾನ ಮಾಡಿದ ಖ್ಯಾತನಾಮರು

Posted By : Srinivasamurthy VN
Source : ANI

ಚೆನ್ನೈ: ತಮಿಳುನಾಡು ವಿಧಾನಸಭೆಗೆ ಇಂದು ನಡೆಯುತ್ತಿರುವ ಮತದಾನದಲ್ಲಿ ಭಾರತೀಯ ಚಿತ್ರರಂಗದ ಖ್ಯಾತನಾಮರು ಮತ್ತು ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ್ದ ರಜಿನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, 6.28 ಕೋಟಿ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದ್ದು, ಬೆಳಗ್ಗೆಯೇ ಚಿತ್ರನಟ ಮತ್ತು ಮಕ್ಕಳ್ ನೀಧಿ ಮಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಮಕ್ಕಳ ಜೊತೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ತೀನಂಪೇಟ್ ನಲ್ಲಿರುವ ಚೆನ್ನೈ ಹೈಸ್ಕೂಲ್ ಮತಗಟ್ಟೆಗೆ ಆಗಮಿಸಿದ ಕಮಲ್ ಹಾಸನ್ ಸರತಿ ಸಾಲಲ್ಲಿ ನಿಂತು ಮತದಾನ ಮಾಡಿದರು.

ಅಂತೆಯೇ ಭಾರತೀಯ ಚಿತ್ರೋದ್ಯಮದ ಮತ್ತೋರ್ವ ಸೂಪರ್ ಸ್ಟಾರ್ ನಟ ರಜಿನಿಕಾಂತ್ ಸಹ ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದಾರೆ. ರಜನಿಕಾಂತ್ ಅವರು ಚೆನ್ನೈನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಮತ ಚಲಾಯಿಸಿದರು.

ಇತ್ತ ಶಿವಗಂಗಾ ಜಿಲ್ಲೆಯ ಕಂದನೂರಿನಲ್ಲಿರುವ ಚಿತ್ತಲ್ ಅಚಿ ಸ್ಮಾರಕ ಪ್ರೌ ಢಶಾಲೆಯ ಮತಕೇಂದ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ ಚಲಾಯಿಸಿದ್ದಾರೆ. ಇದೇವೇಳೆ, ಮಾತನಾಡಿದ ಅವರು, ‘ನಮ್ಮ ಜಾತ್ಯತೀತ, ಪ್ರಗತಿಪರ ಮೈತ್ರಿಕೂಟವು ಭರ್ಜರಿ ಗೆಲುವಿಗೆ ಸಜ್ಜಾಗಿದೆ. ಏಕೆಂದರೆ, ತಮಿಳುನಾಡಿನ ಜನರು ಬದಲಾವಣೆಯನ್ನು ಬಯಸುತ್ತಾರೆ’ ಎಂದು ಹೇಳಿದ್ದಾರೆ.

ಇತ್ತ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ತೀನಂಪೇಟ್ ನಲ್ಲಿರುವ ಸಿಯಟ್ ಕಾಲೇಜಿನಲ್ಲಿ ಮತದಾನ ಮಾಡಿದರು. ಅವರ ಪುತ್ರ ಹಾಗೂ ಚೆಪಾಕ್ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಉದಯನಿಧಿ ಸ್ಚಾಲಿನ್ ಕೂಡ ತಮ್ಮ ಹಕ್ಕು ಚಲಾಯಿಸಿದರು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp