22 ಯೋಧರ ಮಾರಣಹೋಮ ನಡೆಸಿದ್ದ ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಹಿದ್ಮಾ?

ನಕ್ಸಲ್ ಪೀಡಿತ ಪ್ರದೇಶವಾಗಿರುವ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜೋನಾಗುಡದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ಹಿದ್ಮಾ ಈ ಹಿಂದೆ ಸಹ ಹಲವು ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆ.

Published: 06th April 2021 01:22 PM  |   Last Updated: 06th April 2021 01:22 PM   |  A+A-


Naxal Attack

ಸಂಗ್ರಹ ಚಿತ್ರ

Posted By : Vishwanath S
Source : Online Desk

ಛತ್ತೀಸ್ ಗಢ: ನಕ್ಸಲ್ ಪೀಡಿತ ಪ್ರದೇಶವಾಗಿರುವ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜೋನಾಗುಡದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ಹಿದ್ಮಾ ಈ ಹಿಂದೆ ಸಹ ಹಲವು ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆ.

ಗೆರಿಲ್ಲಾ ಯುದ್ಧದ ಮೂಲಕ ಸುಕ್ಮಾದಲ್ಲಿ ನಕ್ಸಲರು ಹಲವು ದಾಳಿಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಬೆಟಾಲಿಯನ್ ಗಳ ಸುಮಾರು 2000 ಸಿಬ್ಬಂದಿ ಕೆಲವು ದಿನಗಳಿಂದ ತೆರ್ರಮ್ ಪ್ರದೇಶದ ಸಿಲ್ಗರ್ ಕಾಡಿನ ಜೋನಾಗುಡ ಬಳಿ ಕಾರ್ಯಚರಣೆಗೆ ಹೊರಟ್ಟಿದ್ದರು. 

ಜೋನಾಗುಡ ಬಳಿ ನಕ್ಸಲರ ಗುಂಪೊಂದು ಬೀಡುಬಿಟ್ಟಿದೆ ಎಂಬ ಮಾಹಿತಿ ಸಿಕ್ಕಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲಿನ ಉಪಗ್ರಹ ಫೋಟೋಗಳಲ್ಲಿ ನಕ್ಸಲರ ಚಲನವಲಗಳು ಕಂಡು ಬಂದಿತ್ತು. ಇದರಂತೆ ನಕ್ಸಲ್ ನಿಗ್ರಹ ಪಡೆ ಜೋನಾಗುಡದ ಬಳಿ ಬರುತ್ತಿದ್ದೆ ಮೂರು ಕಡೆ ಅಡಗಿ ಕುಳಿತ್ತಿದ್ದ ನಕ್ಸಲರು ಯೋಧರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. 

ಈ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು 31 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಗುಂಡಿನ ದಾಳಿ ನಡೆಸಿದ್ದ ನಕ್ಸಲರು ಮೃತ ಯೋಧರ ಬಳಿಯಿದ್ದ ಶಸ್ತ್ರಾಸ್ತ್ರ, ಮದ್ದು ಗುಂಡು, ಯೋಧರು ಹಾಕಿಕೊಂಡಿದ್ದ ಬಟ್ಟೆ, ಶೂಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. 

ಇತ್ತೀಚೆಗೆ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹಿದ್ಮಾ ಹೆಸರು ಕೇಳಿಬರುತ್ತಿದೆ. ಯಾರೀ ಹಿದ್ಮಾ? ಹಿದ್ಮಾನ್ ಪೂರ್ಣ ಹೆಸರು ಮಾಡ್ವಿ ಹಿದ್ಮಾ ಅಕಾ ಇಡಮುಲ್ ಪೊಡಿಯಮ್ ಭೀಮಾ. ಸುಕ್ಮಾ ಜಿಲ್ಲೆಯ ಜಾಗರಗುಂಡ ಪ್ರದೇಶದ ಪುಡಿತಿ ಗ್ರಾಮದವನು. ಅನಕ್ಷರಸ್ಥನಾಗಿದ್ದರೂ ಹಿದ್ಮಾ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಅಲ್ಲದೆ ಸ್ಥಳೀಯ ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾನೆ.

2010ರಲ್ಲಿ ಚಿಂತಲ್ ನರ್ ಬಳಿಯ ತಾಡೆಟ್ಲಾದಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ 76 ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಛತ್ತೀಸಘಡದ ಜಿರಾಮ್ ಕಣಿವೆಯಲ್ಲಿ 2013ರಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ಕಾಂಗ್ರೆಸ್ ನಾಯಕ ಸಹಿತ 30 ಜನರು ಮೃತಪಟ್ಟಿದ್ದರು. ಈ ದಾಳಿಗಳ ಹಿಂದೆಯೂ ಹಿದ್ಮಾನ ಕೈವಾಡವಿತ್ತು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp