ಲಸಿಕೆಯ ಮೊದಲ ಡೋಸ್ ಪಡೆದಿದ್ದ ನಟಿ, ರಾಜಕಾರಣಿ ನಗ್ಮಾಗೆ ಕೊರೋನಾ ದೃಢ

ನಟಿ, ರಾಜಕಾರಣಿ ನಗ್ಮಾ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ನಗ್ಮಾ ಕೊರೋನಾ ಪಾಸಿಟಿವ್ ವರದಿ ಪಡೆದಿದ್ದು ಹೋಂ ಕ್ಯಾರೆಂಟೈನ್‌ನಲ್ಲಿದ್ದಾರೆ ಎಂದು ಮೂಲಗಳು ಹೇಳಿದೆ.

Published: 07th April 2021 10:42 PM  |   Last Updated: 08th April 2021 01:10 PM   |  A+A-


ನಗ್ಮಾ

Posted By : Raghavendra Adiga
Source : Online Desk

ನವದೆಹಲಿ: ನಟಿ, ರಾಜಕಾರಣಿ ನಗ್ಮಾ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ನಗ್ಮಾ ಕೊರೋನಾ ಪಾಸಿಟಿವ್ ವರದಿ ಪಡೆದಿದ್ದು ಹೋಂ ಕ್ಯಾರೆಂಟೈನ್‌ನಲ್ಲಿದ್ದಾರೆ ಎಂದು ಮೂಲಗಳು ಹೇಳಿದೆ.

ಇನ್ನು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ನಗ್ಮಾ ಏಪ್ರಿಲ್ 2ರಂದು ಕೋವಿಡ್-19 ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೂ ವೈರಸ್ ಸೋಂಕು ಕಾಣಿಸಿಕೊಂಡಿದೆ. ಲಸಿಕೆ ಹಾಕಿಸಿಕೊಂಡವರೂ ಜಾಗೃತವಾಗಿರಿ ಎಂದು ಕಾಂಗ್ರೆಸ್ ಮುಖಂಡರೂ ಆಗಿರುವ ನಟಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ನನ್ನ ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದೇನೆ. ಆದರೆ ಕೋವಿಡ್-19 ಗಾಗಿ ಪಾಸಿಟಿವ್ ವರದಿ ಪಡೆದಿದ್ದೇನೆ. ಹಾಗಾಗಿ ಹೋಂ ಕ್ವಾರಂಟೈನ್ ನಲ್ಲಿದ್ದೇನೆ. ಎಲ್ಲರೂ ದಯವಿಟ್ಟು ಕಾಳಜಿ ವಹಿಸಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. 

"ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ನಂತರವೂ ಜಾಗರೂಕರಾಗಿರಿ" ಎಂದು ನಟ ಬರೆದಿದ್ದಾರೆ.

1990 ರಲ್ಲಿ ಸಲ್ಮಾನ್ ಖಾನ್ ಅಭಿನಯದ "ಬಾಗೀ" ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ನಟಿ ನಗ್ಮಾ ಹಲವು ಪ್ರಸಿದ್ಧ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ಅವರು ತೆಲುಗು, ತಮಿಳು, ಭೋಜ್‌ಪುರಿ, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp