ಬಿಜೆಪಿಯ ಸಿಆರ್ ಪಿಎಫ್ ನಿಂದ ಜನರಿಗೆ ಕಿರುಕುಳ, ಮತಗಟ್ಟೆಗಳಿಗೆ ಹೋಗದಂತೆ ಬಲವಂತದ ತಡೆ: ಮಮತಾ ಆರೋಪ
ಬಿಜೆಪಿಯ ಸಿಆರ್ ಪಿಎಫ್ ಜನತೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದು, ಮತಗಟ್ಟೆಗಳಿಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Published: 07th April 2021 09:27 PM | Last Updated: 08th April 2021 01:09 PM | A+A A-

ಬಿಜೆಪಿಯ ಸಿಆರ್ ಪಿಎಫ್ ನಿಂದ ಜನರಿಗೆ ಕಿರುಕುಳ, ಮತಗಟ್ಟೆಗಳಿಗೆ ಹೋಗದಂತೆ ತಡೆ: ಮಮತಾ ಬ್ಯಾನರ್ಜಿ
ಬನೇಶ್ವರ್: ಬಿಜೆಪಿಯ ಸಿಆರ್ ಪಿಎಫ್ ಜನತೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದು, ಮತಗಟ್ಟೆಗಳಿಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರ ಅಣತಿಯಂತೆ ಬಿಜೆಪಿಯ ಸಿಆರ್ ಪಿಎಫ್ ಈ ಕೆಲಸ ಮಾಡುತ್ತಿದ್ದು, ಜನರಿಗೆ ಕಿರುಕುಳ ನೀಡಿ ಹತ್ಯೆ ಮಾಡುತ್ತಿದೆ. ಅಷ್ಟೇ ಅಲ್ಲದೇ ಮತಗಟ್ಟೆಗಳಿಗೆ ತೆರಳದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಚ್ ಬೆಹಾರ್ ನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ ಕೇಂದ್ರದ ಪಡೆಯ ಒಂದು ವಿಭಾಗಗಳು ಮತದಾನದ ವೇಳೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಜನರನ್ನು ಥಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ಅಮಿತ್ ಶಾ ಸುಕ್ಮಾ ಜಿಲ್ಲೆಯಲ್ಲಿ ನಡೆದ ನಕ್ಸಲ್ ದಾಳಿಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ, ಈ ಹಿಂದೆ ಬಿಜೆಪಿ ಸರ್ಕಾರ ಪುಲ್ವಾಮ ದಾಳಿಯನ್ನು ತಡೆಯಲು ವಿಫಲವಾಗಿತ್ತು ಎಂದೂ ವಾಗ್ದಾಳಿ ನಡೆಸಿದ್ದಾರೆ.