ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ಅಭಾವ: ಇನಾಕ್ಯುಲೇಷನ್ ಕೇಂದ್ರಗಳು ಬಂದ್!
ರಾಜ್ಯದಲ್ಲಿ 14 ಲಕ್ಷ ಡೋಸ್ ಕೋವಿಡ್ -19 ಲಸಿಕೆ ಇದ್ದು, ಇದು ಕೇವಲ ಮೂರು ದಿನಗಳ ಮಟ್ಟಿಗೆ ಸಾಕಾಗಲಿದೆ, ಲಸಿಕಾ ಕೊರತೆಯಿಂದಾಗಿ ಅನೇಕ ಇನಾಕ್ಯುಲೇಷನ್ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ ಎಂದು ಮಹಾರಾಷ್ಟ್ರಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ.
Published: 07th April 2021 07:02 PM | Last Updated: 07th April 2021 07:19 PM | A+A A-

ಸಂಗ್ರಹ ಚಿತ್ರ
ಮುಂಬೈ: ರಾಜ್ಯದಲ್ಲಿ 14 ಲಕ್ಷ ಡೋಸ್ ಕೋವಿಡ್ -19 ಲಸಿಕೆ ಇದ್ದು, ಇದು ಕೇವಲ ಮೂರು ದಿನಗಳ ಮಟ್ಟಿಗೆ ಸಾಕಾಗಲಿದೆ, ಲಸಿಕಾ ಕೊರತೆಯಿಂದಾಗಿ ಅನೇಕ ಇನಾಕ್ಯುಲೇಷನ್ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ ಎಂದು ಮಹಾರಾಷ್ಟ್ರಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟೊಪೆ, ಲಸಿಕೆ ಪೂರೈಕೆಯಾಗದ ಕಾರಣ ಡೋಸ್ ಗಳನ್ನು ತೆಗೆದುಕೊಳ್ಳಲು ಕೇಂದ್ರಗಳಿಗೆ ಬರುವ ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. "ಹದಿನಾಲ್ಕು ಲಕ್ಷ ಡೋಸ್ ಗಳು ಮಾತ್ರವೇ ಲಭ್ಯವಿದ್ದು ಅದು ಮೂರು ದಿನಗಳವರೆಗೆ ಮಾತ್ರ ಸಾಕಾಗಲಿದೆ. ನಮಗೆ ಪ್ರತಿ ವಾರ 40 ಲಕ್ಷ ಲಸಿಕೆ ಬೇಕಾಗಲಿದೆ. ಹಾಗಿದ್ದರೆ ಮಾತ್ರ ನಾವು ವಾರದಲ್ಲಿ ಪ್ರತಿದಿನ ಆರು ಲಕ್ಷ ಡೋಸ್ಗಳನ್ನು ನೀಡಲು ಸಾಧ್ಯ. ಆದರೆ ನಾವು ಪಡೆಯುತ್ತಿರುವ ಲಸಿಕೆ ಸಾಲುತ್ತಿಲ್ಲ."ಅವರು ಹೇಳಿದರು.
ರಾಜ್ಯ ಸರ್ಕಾರ ಈ ಹಿಂದೆ ಒಂದು ದಿನದಲ್ಲಿ ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡುತ್ತಿದೆ ಎಂದು ಟೋಪೆ ಹೇಳಿದ್ದರು.
"ವ್ಯಾಕ್ಸಿನೇಷನ್ ಡ್ರೈವ್ ಅನ್ನು ದಿನಕ್ಕೆ ಆರು ಲಕ್ಷಕ್ಕೆ ಏರಿಸುವ ಸಂಬಂಧ ಕೇಂದ್ರ ಸರ್ಕಾರದಿಂದ ನಾವು ಆದೇಶ ಸ್ವೀಕರಿಸಿದ್ದೇವೆ. ಈಗ, ನಾವು ದಿನಕ್ಕೆ ಸುಮಾರು 5 ಲಕ್ಷ ಜನರಿಗೆ ಲಸಿಕೆ ಹಾಕುತ್ತಿದ್ದೇವೆ" ಎಂದು ಅವರು ಹೇಳಿದರು. ಕೊರೋನಾವೈರಸ್ ಪ್ರಕರಣಗಳು ರಾಜ್ಯದಲ್ಲಿ ದಿನದಿನಕ್ಕೆ ಹೆಚ್ಚುತ್ತಿದ್ದು ಒಟ್ಟಾರೆ ಸಾವಿನ ಸಂಖ್ಯೆ 50,000 ಕ್ಕಿಂತ ಹೆಚ್ಚಿರುವುದರಿಂದ ಮಹಾರಾಷ್ಟ್ರಕ್ಕೆ ಆದ್ಯತೆ ನೀಡುವಂತೆ ಸಚಿವರು ಕೇಂದ್ರವನ್ನು ಒತ್ತಾಯಿಸಿದರು. "ಈಗ ಸೋಂಕಿತರಲ್ಲಿ ಹೆಚ್ಚಿನವರು 25 ರಿಂದ 40 ವರ್ಷ ವಯಸ್ಸಿನವರಾಗಿದ್ದಾರೆ" ಎಂದು ಅವರು ಹೇಳಿದರು. ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮತ್ತು ಪ್ರತಿಕಾಯಗಳನ್ನು ರಚಿಸುವ ಮೂಲಕ ವೈರಲ್ ಸೋಂಕನ್ನು ನಿಯಂತ್ರಿಸುವ ತುರ್ತು ಅವಶ್ಯಕತೆಯಿದೆ ಎಂದು ಟೋಪೆ ಹೇಳಿದರು.
ವೈರಸ್ನ ಹೊಸ ರೂಪಾಂತರಿತ ಒತ್ತಡದಿಂದಾಗಿ ಪ್ರಸ್ತುತ ಸೋಂಕು ಹರಡುತ್ತಿದೆಯೇ ಎಂದು ರಾಜ್ಯಗಳಿಗೆ ತಿಳಿಸುವಂತೆ ಅವರು ರೋಗ ನಿಯಂತ್ರಣ ಕೇಂದ್ರವನ್ನು ಒತ್ತಾಯಿಸಿದರು. "ಅದು ನಿಜವಾಗಿದ್ದರೆ, ದಯವಿಟ್ಟು ಔಷಧಿಗಳ ಡೋಸ್ ಎಷ್ಟುಎಂದು ನಮಗೆ ತಿಳಿಸಿ" ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪ್ರತಿದಿನ ಸುಮಾರು 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸಲಾಗುತ್ತಿದೆ ಮತ್ತು ದೈನಂದಿನ ಬಳಕೆ 700 ಮೆಟ್ರಿಕ್ ಅಗತ್ಯವಿದ್ದು ಅದರಲ್ಲಿ ಶೇ 80 ರಷ್ಟು ವೈದ್ಯಕೀಯ ಬಳಕೆಗಾಗಿದೆ ಎಂದು ಸಚಿವರು ಹೇಳಿದ್ದಾರೆ. ಮಹಾರಾಷ್ಟ್ರಕ್ಕೆ ಆಮ್ಲಜನಕ ಪೂರೈಕೆಗೆ ಅನುಕೂಲ ಕಲ್ಪಿಸುವಂತೆ ನೆರೆ ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದೇನೆ ಎಂದು ಸಚಿವರು ಹೇಳಿದರು.
ಮಂಗಳವಾರ ಅಧಿಕೃತ ಹೇಳಿಕೆಯ ಪ್ರಕಾರ ಮಹಾರಾಷ್ಟ್ರವು 1.06 ಕೋಟಿ ಡೋಸ್ ಕೋವಿಡ್ -19 ಲಸಿಕೆ ಪಡೆದಿದ್ದು, ಅದರಲ್ಲಿ 88 ಲಕ್ಷ ಡೋಸ್ಗಳನ್ನು ಬಳಸಲಾಗಿದ್ದರೆ ಶೇ.ಮೂರರಷ್ಟು ವ್ಯರ್ಥವಾಗಿದೆ.