ಛತ್ತೀಸ್ಗಢ: ಅಪಹೃತ ಕೋಬ್ರಾ ಕಮಾಂಡೋ ಫೋಟೋ ಬಿಡುಗಡೆಗೊಳಿಸಿದ ಮಾವೋವಾದಿಗಳು

ಅಪಹರಣ ಮಾಡಿದ್ದ ಕೋಬ್ರಾ ಕಮಾಂಡೋ ಒಬ್ಬರ ಭಾವಚಿತ್ರವನ್ನು ಮಾವೋವಾದಿಗಳ ತಂಡ ಬುಧವಾರ ಬಿಡುಗಡೆ ಮಾಡಿದೆ.

Published: 07th April 2021 01:52 PM  |   Last Updated: 07th April 2021 01:56 PM   |  A+A-


Picture of abducted CoBRA jawan released by Maoists.

ಅಪಹರಣಕ್ಕೊಳಗಾಗಿರುವ ಕೋಬ್ರಾ ಕಮಾಂಡೋ

Posted By : Manjula VN
Source : The New Indian Express

ರಾಯ್ಪುರ: ಅಪಹರಣ ಮಾಡಿದ್ದ ಕೋಬ್ರಾ ಕಮಾಂಡೋ ಒಬ್ಬರ ಭಾವಚಿತ್ರವನ್ನು ಮಾವೋವಾದಿಗಳ ತಂಡ ಬುಧವಾರ ಬಿಡುಗಡೆ ಮಾಡಿದೆ.

ಛತ್ತೀಸ್ಗಢದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಕೋಬ್ರಾದ ಕಮಾಂಡೋ ಒಬ್ಬರನ್ನು ಮಾವೋವಾದಿಗಳು ಅಪಹರಣ ಮಾಡಿದ್ದರು. ಬಳಿಕ ಈ ಕುರಿತು ಪತ್ರಕರ್ತರೊಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಯೋಧನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಮಧ್ಯವರ್ತಿಯೊಬ್ಬರನ್ನು ಸರ್ಕಾರ ನೇಮಕ ಮಾಡಬೇಕೆಂದು ಹೇಳಿದ್ದರು. 

ಇದೀಗ ಯೋಧನ ಫೋಟೋವನ್ನು ಬಿಡುಗಡೆ ಮಾಡಿರುವ ಮಾವೋವಾದಿಗಳು ಯೋಧ ಸುರಕ್ಷಿತವಾಗಿದ್ದು, ನಾವು ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ತಿಳಿಸಿದ್ದಾರೆ. 

ಛತ್ತೀಸ್‌ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯ ಜೊನಗುಡ ಮತ್ತು ಟೆಕಲ್‌ಗುಡದ ಅರಣ್ಯ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಯ ಮೇಲೆ ನಕ್ಸಲರ ಗುಂಪು ಗುಂಡಿನ ದಾಳಿ ನಡೆಸಿದ ಪರಿಣಾಮ 22 ಯೋಧರು ಹುತಾತ್ಮರಾಗಿದ್ದರು. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp