'ಮಾಸ್ಕ್ ಸುರಕ್ಷಾ ಕವಚದಂತೆ, ವಾಹನಗಳಲ್ಲಿ ಒಬ್ಬರೇ ಪ್ರಯಾಣಿಸುವಾಗಲೂ ಅದನ್ನು ಹಾಕಬೇಕು': ದೆಹಲಿ ಹೈಕೋರ್ಟ್

ಖಾಸಗಿ ವಾಹನಗಳಲ್ಲಿ ಒಬ್ಬರೇ ಸಂಚರಿಸುವಾಗ ಕೋವಿಡ್-19 ನಿಯಮ ಪ್ರಕಾರ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ದೆಹಲಿ ಹೈಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

Published: 07th April 2021 12:57 PM  |   Last Updated: 07th April 2021 01:30 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ನವದೆಹಲಿ: ಖಾಸಗಿ ವಾಹನಗಳಲ್ಲಿ ಒಬ್ಬರೇ ಸಂಚರಿಸುವಾಗ ಕೋವಿಡ್-19 ನಿಯಮ ಪ್ರಕಾರ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ದೆಹಲಿ ಹೈಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

ಕೋವಿಡ್-19 ಸೋಂಕು ಹರಡುವಿಕೆಯಿಂದ ಮಾಸ್ಕ್ ಸುರಕ್ಷ ಕವಚವಾಗಿ ಕೆಲಸ ಮಾಡುತ್ತದೆ ಎಂದು ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ನೇತೃತ್ವದ ನ್ಯಾಯಪೀಠ ಹೇಳಿದೆ.

ಖಾಸಗಿ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸದವರಿಗೆ ಚಲನ್ ಗಳ ಹೇರಿಕೆ ಮಾಡುವ ದೆಹಲಿ ಸರ್ಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದನ್ನು ಕೂಡ ನ್ಯಾಯಪೀಠ ನಿರಾಕರಿಸಿತು. ಖಾಸಗಿ ವಾಹನದಲ್ಲಿ ಒಬ್ಬರೇ ಕುಳಿತುಕೊಂಡು ಪ್ರಯಾಣಿಸುವಾಗಲೂ ಅವರು ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದಾರೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ದೇಶಾದ್ಯಂತ ಕೋವಿಡ್-19 ಎರಡನೇ ಅಲೆ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತದೆ, ಲಸಿಕೆ ಪಡೆದ ಮತ್ತು ಪಡೆಯದಿರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕಾಗುತ್ತದೆ ಎಂದು ಹೇಳಿದೆ.

ಖಾಸಗಿ ವಾಹನದಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸದವರಿಗೆ ಚಲನ್ ಗಳ ಹೇರಿಕೆಯ ದೆಹಲಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಕೀಲರು ಸಲ್ಲಿಸಿರುವ ಅರ್ಜಿಗಳನ್ನು ನಿರಾಕರಿಸಿದ ನ್ಯಾಯಮೂರ್ತಿ ಸಿಂಗ್ ಈ ಆದೇಶ ನೀಡಿದ್ದಾರೆ.

ಮಾಸ್ಕ್ ಸುರಕ್ಷ ಕವಚದಂತೆ ಕೆಲಸ ಮಾಡುತ್ತದೆ, ಕೋವಿಡ್-19 ಹರಡುವುದನ್ನು ತಡೆಯುತ್ತದೆ. ಮಾಸ್ಕ್ ಧರಿಸಿದವರನ್ನು ಸೋಂಕಿನಿಂದ ರಕ್ಷಿಸುವುದಲ್ಲದೆ, ಬೇರೆಯವರಿಂದ ಸೋಂಕು ತಗುಲುವುದರಿಂದಲೂ ಕಾಪಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp