ಇಂದು ಸಂಜೆ 7 ಗಂಟೆಗೆ 'ಪರೀಕ್ಷಾ ಪೆ ಚರ್ಚಾ-2021' ಕಾರ್ಯಕ್ರಮ ನೇರ ಪ್ರಸಾರ: ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಂವಾದ 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲೊಂದು ಪರೀಕ್ಷಾ ಪೆ ಚರ್ಚಾ. ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಹೇಗೆ ಸಿದ್ದವಾಗಬೇಕು, ಏನು ಮಾಡಬೇಕು ಎಂದು ಸಲಹೆ ನೀಡುತ್ತಾ ಸಂವಾದ ನಡೆಸುತ್ತಾರೆ.

Published: 07th April 2021 09:57 AM  |   Last Updated: 07th April 2021 10:06 AM   |  A+A-


PM Narendra Modi

ಪ್ರಧಾನಿ ನರೇಂದ್ರ ಮೋದಿ

Posted By : Sumana Upadhyaya
Source : ANI

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲೊಂದು ಪರೀಕ್ಷಾ ಪೆ ಚರ್ಚಾ. ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಹೇಗೆ ಸಿದ್ದವಾಗಬೇಕು, ಏನು ಮಾಡಬೇಕು ಎಂದು ಸಲಹೆ ನೀಡುತ್ತಾ ಸಂವಾದ ನಡೆಸುತ್ತಾರೆ.

ಈ ವರ್ಷ ಕೊರೋನಾ ಇರುವ ಕಾರಣ ಸರಿಯಾಗಿ ಶಾಲೆಗಳಲ್ಲಿ ತರಗತಿಗಳು ನಡೆಯದೆ ವಾರ್ಷಿಕ ಪರೀಕ್ಷೆಗಳು ಮುಂದೂಡಿವೆ. ಹೀಗಾಗಿ ಸ್ವಲ್ಪ ತಡವಾಗಿ ಪ್ರಧಾನಿ ಮೋದಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಈ ಬಾರಿ ಪ್ರಧಾನಿ ಮೋದಿಯವರು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ವರ್ಚುವಲ್ ಆಗಿ ನಡೆಸುತ್ತಿದ್ದಾರೆ. ಅವರು ಇಂದು ಸಾಯಂಕಾಲ 7 ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. 'ಪರೀಕ್ಷಾ ಪೆ ಚರ್ಚಾ'ದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರೊಂದಿಗೆ ಹೊಸ ವಿಧಾನ ಕುರಿತು, ಹಲವು ಆಸಕ್ತಿಕರ ಪ್ರಶ್ನೆಗಳ ಬಗ್ಗೆ ನಮ್ಮ ಪರೀಕ್ಷಾ ಯೋಧರ ಜೊತೆ ಚರ್ಚೆ ನಡೆಸಲಿದ್ದೇನೆ ಎಂದು ಮೋದಿಯವರು ಈ ಹಿಂದೆಯೇ ಟ್ವೀಟ್ ಮಾಡಿದ್ದರು.

ಪ್ರಧಾನಿಯಾದ ಬಳಿಕ ಪರೀಕ್ಷಾ ಪೆ ಚರ್ಚಾ ಮೋದಿಯವರದ್ದು ನಾಲ್ಕನೇ ಅವತರಣಿಕೆ ಪ್ರಸಾರವಾಗುತ್ತಿದ್ದು, ಪರೀಕ್ಷೆ ಯ ಒತ್ತಡದಿಂದ ಹೇಗೆ ಹೊರಬರಬೇಕು ಎಂಬ ಕುರಿತು ಮಕ್ಕಳಿಗೆ ಸಲಹೆ, ಸೂಚನೆ ನೀಡಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್, ಪ್ರಧಾನ ಮಂತ್ರಿಗಳ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಸುಮಾರು 14 ಲಕ್ಷ ಮಂದಿ ಭಾಗವಹಿಸುತ್ತಿದ್ದಾರೆ. ಅವರಲ್ಲಿ 10.5 ಲಕ್ಷ ವಿದ್ಯಾರ್ಥಿಗಳು, 26 ಲಕ್ಷ ಶಿಕ್ಷಕರು, 92 ಸಾವಿರ ಪೋಷಕರು ಭಾಗವಹಿಸುತ್ತಿದ್ದು, ಶೇಕಡಾ 60ಕ್ಕಿಂತ ಹೆಚ್ಚಿನ 9 ಮತ್ತು 10ನೇ ತರಗತಿ ಮಕ್ಕಳಿಗೆ ಸೃಜನಶೀಲತೆಯಿಂದ ಬರೆಯುವ ಬಗ್ಗೆ ಸ್ಪರ್ಧೆಯಿರುತ್ತದೆ ಎಂದರು.

ಇಂದು ಸಾಯಂಕಾಲ 7 ಗಂಟೆಗೆ ದೂರದರ್ಶನ, ಸ್ವಯಂ ಪ್ರಭ ಸೇರಿದಂತೆ 32 ಚಾನೆಲ್ ಗಳು ಮತ್ತು ಸರ್ಕಾರದ ಹಲವು ವೇದಿಕೆಗಳು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿವೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp