ಸಾಂಕ್ರಾಮಿಕ ತಡೆಗಟ್ಟುವಲ್ಲಿ ವೈಫಲ್ಯ ಮುಚ್ಚಿಹಾಕಲು 'ಲಸಿಕೆ ಕೊರತೆ'ಯ ನೆಪ: ಮಹಾ ಸರ್ಕಾರಕ್ಕೆ ಕೇಂದ್ರ ಸಚಿವ ತಿರುಗೇಟು
ಕೋವಿಡ್ ಲಸಿಕೆಗಳ ಕೊರತೆಯಿಂದಾಗಿ ರಾಜ್ಯವು ತೀವ್ರ ಸಮಸ್ಯೆಗೆ ಸಿಕ್ಕಿದೆ ಎಂಬ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್, "ಲಸಿಕೆ ಕೊರತೆಯ ಆರೋಪವು ಸಂಪೂರ್ಣವಾಗಿ ಆಧಾರರಹಿತವಾಗಿದೆ" ಎಂದು ಹೇಳಿದ್ದಾರೆ.
Published: 07th April 2021 08:25 PM | Last Updated: 07th April 2021 08:25 PM | A+A A-

ಹರ್ಷ್ ವರ್ಧನ್
ನವದೆಹಲಿ: ಕೋವಿಡ್ ಲಸಿಕೆಗಳ ಕೊರತೆಯಿಂದಾಗಿ ರಾಜ್ಯವು ತೀವ್ರ ಸಮಸ್ಯೆಗೆ ಸಿಕ್ಕಿದೆ ಎಂಬ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್, "ಲಸಿಕೆ ಕೊರತೆಯ ಆರೋಪವು ಸಂಪೂರ್ಣವಾಗಿ ಆಧಾರರಹಿತವಾಗಿದೆ" ಎಂದು ಹೇಳಿದ್ದಾರೆ.
"ಕಳೆದ ವರ್ಷದುದ್ದಕ್ಕೂ, ಕೇಂದ್ರ ಆರೋಗ್ಯ ಸಚಿವರಾಗಿ, ನಾನು ವೈರಸ್ ವಿರುದ್ಧ ಹೋರಾಡುವಲ್ಲಿ ಮಹಾರಾಷ್ಟ್ರ ಸರ್ಕಾರದ ವೈಫಲ್ಯ ಹಾಗೂ ವಂಚನೆಯ ವಿಧಾನಗಳಿಗೆ ಸಾಕ್ಷಿಯಾಗಿದ್ದೇನೆ. ಅವರ ಕೊರತೆಯ ಆರೋಪವು ವೈರಸ್ ವಿರುದ್ಧ ಹೋರಾಡುವ ದೇಶದ ಪ್ರಯತ್ನಗಳನ್ನು ಒಂದೇ ಏಟಿಗೆ ತಳ್ಳಿಹಾಕುವುದಕ್ಕಾಗಿ ಇದೆ." ಸಚಿವರು ಹೇಳೀದ್ದಾರೆ.
"ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರದ ಕಾರ್ಯಕ್ಷಮತೆ ಉತ್ತಮವಾಗಿಲ್ಲ" ಎಂದು ಅವರು ಹೇಳಿದರು, "ರಾಜ್ಯ ಸರ್ಕಾರವು ಮಹಾರಾಷ್ಟ್ರರನ್ನು ಹೇಗೆ ಅಪಾಯಕ್ಕೆ ಸಿಲುಕಿಸುತ್ತಿದೆ ಎಂಬುದನ್ನು ನೋಡಿದರೆ ಆಘಾತಕಾರಿಯಾಗಿದೆ, ಇದು ಕೇವಲ ಅವರ ವೈಯುಕ್ತಿಕ ವಶೀಲಿಗಾಗಿ ಇದೆ.
"ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೆ ಮತ್ತೆ ವಿಫಲವಾಗಿತ್ತಿರುವುದರಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನದ ಸಲುವಾಗಿ ಲಸಿಕೆ ಕೊರತೆಯ ಮಾತನಾಡುತ್ತಿದ್ದಾರೆ.ಒಟ್ಟಾರೆಯಾಗಿ, ರಾಜ್ಯವು ಒಂದು ಬಿಕ್ಕಟ್ಟಿನಿಂದ ಇನ್ನೊಂದಕ್ಕೆ ಹೊರಳುತಿರುವಾಗ , ರಾಜ್ಯ ನಾಯಕತ್ವವು ಸಂತೋಷದಿಂದ ನಿದ್ರಿಸುತ್ತಿದೆ ಎಂದು ತೋರುತ್ತಿದೆ."
"ಅಂತೆಯೇ, ಚುಚ್ಚುಮದ್ದಿನ ಬಗ್ಗೆ ತಪ್ಪು ಮಾಹಿತಿ ಮತ್ತು ಭೀತಿಯನ್ನು ಹರಡಲು ಉದ್ದೇಶಿಸಿರುವ ಛತ್ತೀಸ್ ಘರ್ ನಾಯಕರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ರಾಜ್ಯ ಸರ್ಕಾರವು ರಾಜಕೀಯ ಆರೋಗ್ಯಕ್ಕಿಂತ ಹೆಚ್ಚಾಗಿ ತಮ್ಮ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸಿದರೆ ಉತ್ತಮ" ಸಚಿವರು ಹೇಳಿದರು.