ನಕ್ಸಲರಿಂದ ಬಿಡುಗಡೆಯಾದ ಯೋಧ ಸಿಆರ್‌ಪಿಎಫ್ ಶಿಬಿರಕ್ಕೆ ವಾಪಾಸ್

ಕೋಬ್ರಾ ಪಡೆಯ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ನಕ್ಸಲರಿಂದ ಬಿಡುಗಡೆಯಾದ ನಂತರ ಬಿಜಾಪುರದ ಸಿಆರ್‌ಪಿಎಫ್  ಶಿಬಿರಕ್ಕೆ ಕರೆತರಲಾಗಿದೆ.
ರಾಕೇಶ್ವರ ಸಿಂಗ್ ಮನ್ಹಾಸ್
ರಾಕೇಶ್ವರ ಸಿಂಗ್ ಮನ್ಹಾಸ್

ಬಿಜಾಪುರ(ಛತ್ತೀಸ್ ಘರ್): ಕೋಬ್ರಾ ಪಡೆಯ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ನಕ್ಸಲರಿಂದ ಬಿಡುಗಡೆಯಾದ ನಂತರ ಬಿಜಾಪುರದ ಸಿಆರ್‌ಪಿಎಫ್  ಶಿಬಿರಕ್ಕೆ ಕರೆತರಲಾಗಿದೆ.

"ನಾವು ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದ್ದೇವೆ. ಅವರು ಇಲ್ಲಿ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ" ಎಂದು ಬಿಜಾಪುರ ಎಸ್ಪಿ ಹೇಳಿದ್ದಾರೆ.

"ಇಂದು ನನ್ನ ಜೀವನದ ಅತ್ಯಂತ ಸಂತೋಷದಾಯಕ ದಿನ. ಅವರು ಹಿಂದಿರುಗುವ ಬಗ್ಗೆ ನಾನು ಯಾವಾಗಲೂ ಭರವಸೆ ಹೊಂದಿದ್ದೆ. " ಎಂದು ಸಿಆರ್‌ಪಿಎಫ್ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಪತ್ನಿ ಮೀನು ಹೇಳಿದ್ದಾರೆ.

ಏಪ್ರಿಲ್ 3 ರಂದು ನಡೆದ ಬಿಜಾಪುರ ನಕ್ಸಲ್ ದಾಳಿಯ ವೇಳೆ ರಾಕೇಶ್ವರ ಸಿಂಗ್ ಅವರನ್ನು ನಕ್ಸಲರು ಅಪಹರಿಸಿದ್ದರು. ಏಪ್ರಿಲ್ 3 ರಂದು ಬಸ್ತಾರ್ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದ ನಂತರ ನಕ್ಸಲರಿಂದ ಅಪಹರಿಸಲ್ಪಟ್ಟ ಕೋಬ್ರಾ ಪಡೆಯ ಯೋಧ  ರಾಕೇಶ್ವರ ಸಿಂಗ್ ಅವರನ್ನು ಇಂದು ನಕ್ಸಲರಿಂದ ಬಿಡುಗಡೆ ಆಗಿದ್ದಾರೆ. ಸಿಆರ್‌ಪಿಎಫ್‌ನ ಗಣ್ಯ ಘಟಕವಾದ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್) ನ 210 ನೇ ಬೆಟಾಲಿಯನ್‌ನ ಕಮಾಂಡೋ ರಾಕೇಶ್ವರ ಸಿಂಗ್ ಶನಿವಾರ ನಕ್ಸಲ್‌ಗಳೊಂದಿಗಿನ ಭೀಕರ ಗುಂಡಿನ ಕಾಳಗದ ನಂತರ ನಾಪತ್ತೆಯಾಗಿದ್ದರು.

ಏಪ್ರಿಲ್ 2 ರ ರಾತ್ರಿ, ಬಿಜಾಪುರ ಮತ್ತು ಸುಕ್ಮಾ ಗಡಿಯಲ್ಲಿ ಕಾಡುಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತೆರಳಿದ್ದ ತಂಡದಲ್ಲಿ ರಾಕೇಶ್ವರ ಸಿಂಗ್ ಭಾಗವಹಿಸಿದ್ದರು. ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ 22 ಸೈನಿಕರು ಸಾವನ್ನಪ್ಪಿದ್ದು ಮತ್ತು 31 ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com