ಭಾರತದಲ್ಲಿ 9 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ನೀಡಿಕೆ

ದೇಶದಲ್ಲಿ ಈವರೆಗೆ 9 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.

Published: 08th April 2021 02:47 PM  |   Last Updated: 08th April 2021 02:47 PM   |  A+A-


Covid-10 Vaccine

ಕೋವಿಡ್-19 ಲಸಿಕೆ

Posted By : Lingaraj Badiger
Source : UNI

ನವದೆಹಲಿ: ದೇಶದಲ್ಲಿ ಈವರೆಗೆ 9 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.

ಒಟ್ಟು 13,77,304 ಕೇಂದ್ರಗಳ ಮೂಲಕ 9,01,98,673 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ದೇಶದಲ್ಲಿ ಈವರೆಗೆ ನೀಡಲಾದ ಒಟ್ಟು ಲಸಿಕೆ ಡೋಸ್ ಗಳ ಪೈಕಿ ಶೇ. 60ರಷ್ಟು ಎಂಟು ರಾಜ್ಯಗಳಲ್ಲಿ ನೀಡಲಾಗಿದೆ. ಮಹಾರಾಷ್ಟ್ರವೊಂದರಲ್ಲೇ ಶೇ 9.92 ರಷ್ಟು ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 

ದಿನಕ್ಕೆ ಸರಾಸರಿ 34,30,502 ಡೋಸ್ ಲಸಿಕೆ ನೀಡಲಾಗುತ್ತಿದ್ದು, ಪ್ರತಿದಿನ ಲಸಿಕೆ ನೀಡುತ್ತಿರುವ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ ಎಂದು ಸಚಿವಾಲಯ ಹೇಳಿದೆ.

12 ರಾಜ್ಯಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ತೀವ್ರ ಏರಿಕೆ ಮುಂದುವರೆದಿದೆ. ಈ ಮಧ್ಯೆ, ಮಾರ್ಚ್ ಮತ್ತು ಏಪ್ರಿಲ್ 2021 ರ ಮೊದಲ ಏಳು ದಿನಗಳಲ್ಲಿ ವಾರದ ರಾಷ್ಟ್ರೀಯ ಸಕಾರಾತ್ಮಕ ಪ್ರಮಾಣ ಶೇ. 2.19 ರಿಂದ 8.40ಕ್ಕೆ ಏರಿದೆ.

ದೇಶದಲ್ಲಿ ಈವರೆಗೆ ಸೋಂಕಿನಿಂದ 1,18,51,393 ಮಂದಿ ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣ ಶೇ 91.67ಕ್ಕೆ ಕುಸಿದಿದೆ. 
ಕಳೆದ 24 ಗಂಟೆಗಳಲ್ಲಿ ಒಟ್ಟು 59,258 ಮಂದಿ ಚೇತರಿಸಿಕೊಂಡಿದ್ದು, 685 ಸಾವುಗಳು ವರದಿಯಾಗಿವೆ.

ಹೊಸ ಸಾವುಗಳ ಪೈಕಿ ಶೇ 87.59 ರಷ್ಟು ಸಾವುಗಳು ಹತ್ತು ರಾಜ್ಯಗಳಿಂದಲೇ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 322, ಪಂಜಾಬ್ ನಲ್ಲಿ 62 ಸಾವುಗಳು ವರದಿಯಾಗಿವೆ. 

ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,10,319 ತಲುಪಿದ್ದು, ಇದು ದೇಶದಲ್ಲಿ ಈವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ 7.04ರಷ್ಟಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp