'ದ್ವೇಷ ಭಾಷಣ': ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಚುನಾವಣಾ ಆಯೋಗ ನೋಟೀಸ್

ಪಶ್ಚಿಮ ಬಂಗಾಳದ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಗೆ ಚುನಾವಣಾ ಆಯೋಗ ಗುರುವಾರ ನೋಟೀಸ್ ನೀಡಿದೆ. ಅಲ್ಲದೆ ನೋಟಿಸ್‌ಗೆ 24 ಗಂಟೆಗಳ ಒಳಗೆ ಉತ್ತರಿಸಬೇಕೆಂದು ಹೇಳಲಾಗಿದೆ.
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಗೆ ಚುನಾವಣಾ ಆಯೋಗ ಗುರುವಾರ ನೋಟೀಸ್ ನೀಡಿದೆ. ಅಲ್ಲದೆ ನೋಟಿಸ್‌ಗೆ 24 ಗಂಟೆಗಳ ಒಳಗೆ ಉತ್ತರಿಸಬೇಕೆಂದು ಹೇಳಲಾಗಿದೆ.

ಸಿಪಿಐ-ಎಂಎಲ್ ಕೇಂದ್ರ ಸಮಿತಿಯ ಕವಿತಾ ಕೃಷ್ಣನ್ ಅವರಿಂದ ಆಯೋಗಕ್ಕೆ ದೂರು ಬಂದಿದ್ದು, ಮಾರ್ಚ್ 29 ರಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಸುವೇಂದು ನಂದಿಗ್ರಾಮದಲ್ಲಿ "ದ್ವೇಷ ಭಾಷಣ" ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಾದರಿ ನೀತಿ ಸಂಹಿತೆಯ ಎರಡು ನಿಬಂಧನೆಗಳನ್ನು ಆಯೋಗ ಉಲ್ಲೇಖಿಸಿದೆ. ಅದು ಇತರ ರಾಜಕೀಯ ಪಕ್ಷಗಳ ಕುರಿತು ಟೀಕಿಸಿದಾಗ ಅವರ ನೀತಿಗಳು ಮತ್ತು ಕಾರ್ಯಕ್ರಮಗಳು, ಹಿಂದಿನ ದಾಖಲೆ ಮತ್ತು ಕೆಲಸಗಳಿಗೆ ಇದು ಸೀಮಿತವಾಗಿರಬೇಕು,ಪರಿಶೀಲಿಸದ ಆರೋಪಗಳ ಆಧಾರದ ಮೇಲೆ ಇತರ ಪಕ್ಷಗಳು ಅಥವಾ ಅವರ ಕಾರ್ಯಕರ್ತರ ಮೇಲೆ ಯೀಕೆಯನ್ನು ತಪ್ಪಿಸಬೇಕು. ಮತಗಳನ್ನು ಪಡೆದುಕೊಳ್ಳಲು ಜಾತಿ ಅಥವಾ ಕೋಮು ಭಾವನೆಗಳಿಗೆ ಯಾವುದೇ ಧಕ್ಕೆ ತರುವಂತಿಲ್ಲ ಎಂದು ಮತ್ತೊಂದು ನಿಬಂಧನೆ ಹೇಳುತ್ತದೆ.

ಮಾದರಿ ನೀತಿ ಸಂಹಿತೆಯ ಕೆಲವು ಷರತ್ತುಗಳನ್ನು ಉಲ್ಲಂಘಿಸಿರುವುದು ಆಯೋಗದ ಗಮನಕ್ಕೆ ಬಂದಿದೆ ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮದಿಂದ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com