ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಕೊರೋನಾ ಪಾಸಿಟಿವ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಗುರುವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

Published: 08th April 2021 07:55 PM  |   Last Updated: 08th April 2021 07:55 PM   |  A+A-


Sabarimala won't be allowed to turn into Ayodhya: Pinarayi Vijayan

ಪಿಣರಾಯಿ ವಿಜಯನ್

Posted By : Lingaraj Badiger
Source : The New Indian Express

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಗುರುವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

75 ವರ್ಷದ ಪಿಣರಾಯಿ ವಿಜಯನ್ ಅವರಿಗೆ ಯಾವುದೇ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಅವರನ್ನೂ ಕಣ್ಣೂರಿನಲ್ಲಿರುವ ಮನೆಯಿಂದ ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ವಿಜಯನ್ ಅವರ ಮಗಳು ವೀಣಾ ಮತ್ತು ಅಳಿಯ ಮೊಹಮ್ಮದ್ ರಿಯಾಜ್ ಅವರಿಗೆ ಏಪ್ರಿಲ್ 6 ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಮುಖ್ಯಮಂತ್ರಿ ತಮ್ಮ ಮಗಳ ಸಂಪರ್ಕದಲ್ಲಿದ್ದರಿಂದ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ವರದಿ ಸಹ ಪಾಸಿಟಿವ್ ಬಂದಿದೆ.

ಪಿಣರಾಯಿ ವಿಜಯನ್  ಅವರು ಮಾರ್ಚ್ 3 ರಂದು ಕೋವಿಡ್-19 ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದರು.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp