ಹತ್ತು ರಾಜ್ಯಗಳಲ್ಲಿ ಕೋವಿಡ್-19 ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆ!

ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್, ಕೇರಳ ಮತ್ತು ಪಂಜಾಬ್ ಸೇರಿದಂತೆ ಹತ್ತು ರಾಜ್ಯಗಳಲ್ಲಿ  ಕೋವಿಡ್-19 ದೈನಂದಿನ ಪ್ರಕರಣಗಳಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್, ಕೇರಳ ಮತ್ತು ಪಂಜಾಬ್ ಸೇರಿದಂತೆ ಹತ್ತು ರಾಜ್ಯಗಳಲ್ಲಿ  ಕೋವಿಡ್-19 ದೈನಂದಿನ ಪ್ರಕರಣಗಳಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ದೇಶದಲ್ಲಿ ಶೇ.84. 21 ರಷ್ಟು ಅಂದರೆ 1,26, 789 ಹೊಸ ಪ್ರಕರಣಗಳು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಮಾರ್ಚ್ ಮತ್ತು ಏಪ್ರಿಲ್ ನ ಮೊದಲ ಏಳು ವಾರಗಳಲ್ಲಿ ರಾಷ್ಟ್ರೀಯ ವಾರದ ಕೋವಿಡ್-19 ಪಾಸಿಟಿವಿಟಿ ದರ ಶೇ. 2.19ರಿಂದ ಶೇ. 8.40ಕ್ಕೆ ಏರಿಕೆಯಾಗಿದೆ.  ಒಂದೇ ದಿನ ದೇಶಾದ್ಯಂತ  1, 26, 789 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1, 29, 28, 574ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ  59,907 ದೈನಂದಿನ ಪ್ರಕರಣಗಳು ವರದಿಯಾಗಿದ್ದರೆ, ಛತ್ತೀಸ್ ಗಢದಲ್ಲಿ 10, 310, ಕರ್ನಾಟಕದಲ್ಲಿ 6, 976  ಹೊಸ ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 9,10,319ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿನ ಒಟ್ಟಾರೇ ಸೋಂಕಿತರ ಸಂಖ್ಯೆ ಶೇ. 7.04ರಷ್ಟಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ  ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಕೇರಳದಿಂದ ಒಟ್ಟಾರೇ ಶೇ. 74. 13 ರಷ್ಟು ಪ್ರಕರಣಗಳು ವರದಿಯಾಗಿದ್ದರೆ ಮಹಾರಾಷ್ಟ್ರವೊಂದರಲ್ಲಿಯೇ ಶೇ.55. 26 ರಷ್ಟು ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್, ಕೇರಳ ಮತ್ತು ಪಂಜಾಬ್ ಸೇರಿದಂತೆ ಹನ್ನೇರಡು ರಾಜ್ಯಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 59, 258 ಮಂದಿ ಚೇತರಿಕೆಯೊಂದಿಗೆ ಗುಣಮುಖರಾದವರ ಒಟ್ಟುು ಸಂಖ್ಯೆ 1, 18,51,393ಕ್ಕೆ ಏರಿಕೆಯಾದರೆ, ಕಳೆದ 24 ಗಂಟೆಗಳಲ್ಲಿ 685 ಸಾವಿನ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 322, ಪಂಜಾಬಿನಲ್ಲಿ 62 ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com