ಉತ್ತರ ಪ್ರದೇಶ: ಒಂದೇ ದಿನ ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ವರದಿ!

ಉತ್ತರ ಪ್ರದೇಶದಲ್ಲಿ ಒಂದೇ ದಿನ ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿದೆ. 
ಉತ್ತರ ಪ್ರದೇಶ: ಒಂದೇ ದಿನ ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ವರದಿ!
ಉತ್ತರ ಪ್ರದೇಶ: ಒಂದೇ ದಿನ ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ವರದಿ!

ನವದೆಹಲಿ: ಉತ್ತರ ಪ್ರದೇಶದಲ್ಲಿ ಒಂದೇ ದಿನ ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿದೆ. 24 ಗಂಟೆಗಳಲ್ಲಿ 8,490  ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರೆ, 39 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. 

ಈ ಪೈಕಿ ಶೇ.50 ರಷ್ಟು ಪ್ರಕರಣಗಳು ಲಖನೌ, ಪ್ರಯಾಗ್ ರಾಜ್, ವಾರಾಣಸಿ, ಕಾನ್ಪುರದಲ್ಲಿ ವರದಿಯಾಗಿವೆ. ರಾಜ್ಯದ 6 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಬಳಿಕ ಕೊರೋನಾ ಪ್ರಕರಣಗಳು ಹೆಚ್ಚು ವರದಿಯಾಗಿವೆ. 

ಸೆ.11, 2020 ರಂದು ಉತ್ತರ ಪ್ರದೇಶದಲ್ಲಿ ಒಂದೇ ದಿನ 7103 ಮಂದಿಗೆ ಕೊರೋನಾ ದೃಢಪಟ್ಟಿತ್ತು. ಈಗ 8 ಸಾವಿರದಷ್ಟು ಪ್ರಕರಣಗಳು ಒಂದೇ ದಿನ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 39,338ಕ್ಕೆ ಏರಿಕೆಯಾಗಿದ್ದು ಈ ವರೆಗೂ 9,003 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 

ರಾಜ್ಯದಲ್ಲಿ ಈ ವರೆಗೂ 66,88,260 ಮಂದಿಗೆ ಕೊರೋನಾ ಲಸಿಕೆಯ ಮೊದಲ ಡೋಸ್ ನ್ನು ನೀಡಲಾಗಿದ್ದು, ಎರಡೂ ಡೋಸ್ ಗಳನ್ನು  11,79,437 ಮಂದಿ ತೆಗೆದುಕೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಲಖನೌ ನಲ್ಲಿ ಆಸ್ಪತ್ರೆಗಳು ಕೋವಿಡ್-19 ರೋಗಿಗಳನ್ನು ದಾಖಲು ಮಾಡಿಸಿಕೊಳ್ಳುವುದನ್ನು ನಿಲ್ಲಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com