ಪಶ್ಚಿಮ ಬಂಗಾಳ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ 13 ತರಹೇವಾರಿ ಭಕ್ಷ್ಯ ಭೋಜನ!

ಪಶ್ಚಿಮ ಬಂಗಾಳದ ಬಾಬಾನಿಪುರದಲ್ಲಿ ಇಂದು ಮನೆ ಮನೆಗೆ ಹೋಗಿ ಮತ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಸಮರೇಂದ್ರ ಪ್ರಸಾದ್ ಬಿಸ್ವಾಸ್ ಅವರ ನಿವಾಸದಲ್ಲಿ ಮಧ್ಯಾಹ್ನ ಭೋಜನ ಸವಿದರು. ಪಕ್ಷದ ಮುಖಂಡರಾದ ಪಕ್ಷದ ಮುಖಂಡರಾದ ಸ್ವಪನ್ ದಾಸ್‌ಗುಪ್ತಾ ಮತ್ತು ದಿನೇಶ್ ತ್ರಿವೇದಿ ಕೂಡ ಪಾಲ್ಗೊಂಡಿದ್ದರು.
ಮಧ್ಯಾಹ್ನದ ಭೋಜನ ಮಾಡುತ್ತಿರುವ ಅಮಿತ್ ಶಾ
ಮಧ್ಯಾಹ್ನದ ಭೋಜನ ಮಾಡುತ್ತಿರುವ ಅಮಿತ್ ಶಾ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಾಬಾನಿಪುರದಲ್ಲಿ ಇಂದು ಮನೆ ಮನೆಗೆ ಹೋಗಿ ಮತ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಸಮರೇಂದ್ರ ಪ್ರಸಾದ್ ಬಿಸ್ವಾಸ್ ಅವರ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಸವಿದರು. ಪಕ್ಷದ ಮುಖಂಡರಾದ ಪಕ್ಷದ ಮುಖಂಡರಾದ ಸ್ವಪನ್ ದಾಸ್‌ಗುಪ್ತಾ ಮತ್ತು ದಿನೇಶ್ ತ್ರಿವೇದಿ ಕೂಡ ಪಾಲ್ಗೊಂಡಿದ್ದರು.

ಅಮಿತ್ ಶಾ ಅವರ ಮಧ್ಯಾಹ್ನದ ಊಟಕ್ಕಾಗಿ ಲುಚಿ, ರೊಟ್ಟಿ, ಚಾಲ್ಲರ್ ದಾಲ್, ಬೈಂಗನ್ ಭಜಾ, ಕುಮ್ರೊ (ಕುಂಬಳಕಾಯಿ) ಭಜಾ, ಪಟಾಲ್ ಸಬ್ಜಿ, ಚನಾರ್ (ಪನೀರ್) ದಾಲ್ನಾ, ಧೋಕರ್ ದಾಲ್ನಾ, ಭಿಂದಿ ಸಬ್ಜಿ, ಮಾವಿನ ಚಾಟ್ನಿ, ಪಾಪಾಡ್ ಮತ್ತು ಐದು ವಿಧದ ಕೋಲ್ಕತ್ತಾದ ವಿಶೇಷ ಸಿಹಿತಿಂಡಿಗಳನ್ನು ತಯಾರಿಸಲಾಗಿತ್ತು.

ಇದೇ ವೇಳೆ ಚುನಾವಣೆ ಕುರಿತಂತೆ  ಮಾತನಾಡಿದ ಬಿಸ್ವಾಸ್, ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರ ಬೆಂಬಲದಿಂದಾಗಿ ಬೆಳೆದ ಮಮತಾ ಬ್ಯಾನರ್ಜಿಗೆ ಇಂದು ಅವರ ನೆನಪಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಡ ಸರ್ಕಾರವನ್ನು ಕಿತ್ತು ಹಾಕಿ ಮಮತಾ ಬ್ಯಾನರ್ಜಿ ಬೆಳೆಯಲು ಬೆಂಬಲಿಸಿತ್ತು,ಇಲ್ಲವಾದರೆ ಈಗ ಅಷ್ಟು ಎತ್ತರಕ್ಕೆ ಆಕೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com