ಮುಂದಿನ ವರ್ಷದ ಚುನಾವಣೆಗಾಗಿ ಪ್ರಶಾಂತ್ ಕಿಶೋರ್ ತಂಡ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯ ಸಾಧ್ಯತೆ

ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಂತೆಯೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ  ಪ್ರಧಾನ ಸಲಹೆಗಾರರಾಗಿ ನೇಮಕವಾಗಿರುವ ಚುನಾವಣಾ ರಣತಂತ್ರ ಪರಿಣತ ಪ್ರಶಾಂತ್ ಕಿಶೋರ್ , ತನ್ನ ತಂಡದೊಂದಿಗೆ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯಹೂಡುವ ಸಾಧ್ಯತೆಯಿದೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಚಂಡೀಘಡ: ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಂತೆಯೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ  ಪ್ರಧಾನ ಸಲಹೆಗಾರರಾಗಿ ನೇಮಕವಾಗಿರುವ ಚುನಾವಣಾ ರಣತಂತ್ರ ಪರಿಣತ ಪ್ರಶಾಂತ್ ಕಿಶೋರ್ , ತನ್ನ ತಂಡದೊಂದಿಗೆ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯಹೂಡುವ ಸಾಧ್ಯತೆಯಿದೆ.

ಕಿಶೋರ್ ಮತ್ತವರ ತಂಡ ಸರ್ಕಾರದ ಕಾರ್ಯಕ್ಷಮತೆ ಬಗ್ಗೆ ಜನರಿಂದ ಪ್ರತ್ರಿಕ್ರಿಯೆ ಪಡೆಯಲಿದ್ದು, ಕಳೆದ ಐದು ವರ್ಷಗಳಲ್ಲಿ ಆಡಳಿತಾರೂಢ ಪಕ್ಷದ ಶಾಸಕರ ಪ್ರಗತಿ ಕಾರ್ಡ್ ತಯಾರಿಸುವ ನಿರೀಕ್ಷೆಯಿದೆ.

ಕೆಲ ದಿನಗಳ ಹಿಂದೆ ಕಿಶೋರ್, ಕಾಂಗ್ರೆಸ್ ಪಕ್ಷದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಹಾಗೂ ಪಕ್ಷದ ಹಿರಿಯ ಶಾಸಕರನ್ನು ಭೇಟಿ ಮಾಡಿದ್ದರು. ಅಧಿಕಾರಶಾಹಿ ಸರ್ಕಾರವನ್ನು ನಡೆಸುತ್ತಿದೆ ಎಂದು ಅವರು ಕಿಶೋರ್ ಗೆ ತಿಳಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಕಿಶೋರ್  ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪ್ರತಿಕ್ರಿಯೆ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಕೆಲದಿನಗಳಿಂದ ಅಷ್ಟಾಗಿ ಕಾಣಿಸಿಕೊಳ್ಳದ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಪ್ರಮುಖ ಪಾತ್ರದ ಬಗ್ಗೆಯೂ ಕಿಶೋರ್ ಗಮನ ಹರಿಸಿದ್ದಾರೆ. 

ಅಮರೀಂದರ್ ಸಿಂಗ್ ಅವರ ಫಾರಂಹೌಸ್ ನಲ್ಲಿ ಇತ್ತೀಚಿಗೆ ಕಿಶೋರ್ ಭೇಟಿಯಾಗಿದ್ದಾರೆ  ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯ ನಿವಾಸದ ಪಕ್ಕದ ಬಂಗಲೆಯಲ್ಲಿ  ಕಿಶೋರ್ ವಾಸಿಸಲಿದ್ದು, ಅವರೊಂದಿಗೆ ಸಮನ್ವಯ ಸಾಧಿಸಲು ಅಮರಿಂದರ್ ತಮ್ಮ ರಾಜಕೀಯ ಕಾರ್ಯದರ್ಶಿ ಸಂದೀಪ್ ಸಿಂಗ್ ಸಂಧು ಮತ್ತು ಅವರ ಮೊಮ್ಮಗ ನಿರ್ವಾನ್ ಸಿಂಗ್ ಅವರನ್ನು ನಿಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಎಎಸ್ ಅಧಿಕಾರಿಯೊಬ್ಬರಿಗೆ ಕಿಶೋರ್ ಅವರೊಂದಿಗೆ ಸಮನ್ವಯ ಸಾಧಿಸಲು ತಿಳಿಸಲಾಗಿದೆ. ಕಿಶೋರ್ ಮತ್ತವರ ತಂಡ 2017 ತಂಡಕ್ಕಿಂತ ದೊಡ್ಡದಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಸುಮಾರು 250 ಜನರು ಕೆಲಸ ಮಾಡಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com