10 ರಾಜ್ಯಗಳಿಂದ ಶೇ.87 ಕೋವಿಡ್-19 ಸೋಂಕಿತರ ಸಾವು; ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು! 

ಕೋವಿಡ್-19 ಎರಡನೇ ಅಲೆ ರಾಷ್ಟ್ರಾದ್ಯಂತ ವೇಗವಾಗಿ ಹರಡುತ್ತಿದ್ದು, ಮರಣ ಪ್ರಮಾಣ 10 ರಾಜ್ಯಗಳಿಂದ ಶೇ.87 ರಷ್ಟಿದೆ ಎಂಬ ಅಘಾತಕಾರಿ ಅಂಶವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ-ಅಂಶಗಳು ಬಹಿರಂಗಪಡಿಸಿವೆ.
ಕೋವಿಡ್-19 ರೋಗಿಗಳು
ಕೋವಿಡ್-19 ರೋಗಿಗಳು

ನವದೆಹಲಿ: ಕೋವಿಡ್-19 ಎರಡನೇ ಅಲೆ ರಾಷ್ಟ್ರಾದ್ಯಂತ ವೇಗವಾಗಿ ಹರಡುತ್ತಿದ್ದು, ಮರಣ ಪ್ರಮಾಣ 10 ರಾಜ್ಯಗಳಿಂದ ಶೇ.87 ರಷ್ಟಿದೆ ಎಂಬ ಅಘಾತಕಾರಿ ಅಂಶವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ-ಅಂಶಗಳು ಬಹಿರಂಗಪಡಿಸಿವೆ.

ಮೃತರ ಸಂಖ್ಯೆ 301 ಇರುವ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮರಣಪ್ರಮಾಣ ದಾಖಲಾಗುತ್ತಿದ್ದು, ಸೋಂಕಿತರ ಪೈಕಿ 91 ಮಂದಿಯ ಸಾವಿನೊಂದಿಗೆ ಚತ್ತೀಸ್ ಗಢ ಎರಡನೇ ಸ್ಥಾನದಲ್ಲಿದೆ. 

24 ಗಂಟೆಗಳಲ್ಲಿ ದೇಶಾದ್ಯಂತ 794 ಮಂದಿ ಕೋವಿಡ್-19 ಸೋಂಕಿಗೆ ಮೃತಪಟ್ಟಿದ್ದು, ಸಾವಿನ ಒಟ್ಟು ಸಂಖ್ಯೆ 1,68,436 ಕ್ಕೆ ಏರಿಕೆಯಾಗಿದೆ.
 
56 ಮಂದಿ ಮೃತಪಟ್ಟಿರುವ ಪಂಜಾಬ್ ಮರಣ ಪ್ರಮಾಣ ಹೆಚ್ಚಿರುವ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದ್ದು, 46 ಮಂದಿ ಸಾವನ್ನಪ್ಪಿರುವ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ, ಗುಜರಾತ್ (42) ದೆಹಲಿ (39) ಉತ್ತರ ಪ್ರದೇಶ (36) ರಾಜಸ್ಥಾನ (32) ತಮಿಳುನಾಡು, ಮಧ್ಯಪ್ರದೇಶಗಳಲ್ಲಿ ತಲಾ 32 ಮಂದಿ ಕೋವಿಡ್-19 ನಿಂದ ಜೀವ ಕಳೆದುಕೊಂಡಿದ್ದಾರೆ. 

ಪಾಂಡಿಚೆರಿ, ಲಡಾಖ್, ದಮನ್ ಮತ್ತು ಡಿಯು, ದಾದ್ರಾ ನಗರ ಹವೇಲಿ, ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ, ಸಿಕ್ಕೀಂ, ಮಿಜೋರಾಮ್, ಮಣಿಪುರ, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಈ  24 ಗಂಟೆಗಳಲ್ಲಿ ಶೂನ್ಯ ಮರಣ ಪ್ರಮಾಣವನ್ನು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com