ಕೂಚ್ ಬೆಹಾರ್ ಹಿಂಸಾಚಾರ ಪ್ರಚೋದಿಸಿದ್ದು ದೀದಿ: ಅಮಿತ್ ಶಾ

ಪಶ್ಚಿಮ ಬಂಗಾಳ ವಿಧಾನಸಭೆಯ ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ಬೆಹಾರ್ ನಲ್ಲಿ ನಡೆದ ಹಿಂಸಾಚಾರವನ್ನು ಪ್ರಚೋದಿಸಿದ್ದು ಸಿಎಂ ಮಮತಾ ಬ್ಯಾನರ್ಜಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. 
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆಯ ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ಬೆಹಾರ್ ನಲ್ಲಿ ನಡೆದ ಹಿಂಸಾಚಾರವನ್ನು ಪ್ರಚೋದಿಸಿದ್ದು ಸಿಎಂ ಮಮತಾ ಬ್ಯಾನರ್ಜಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. 

ಕೇಂದ್ರ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಕೂಚ್ ಬೆಹಾರ್ ನಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದರು ಎಂದು ಅಮಿತ್ ಶಾ ಹೇಳಿದ್ದಾರೆ.

ಏ.10 ರಂದು ಕೂಚ್ ಬೆಹಾರ್ ನಲ್ಲಿ ಮತದಾನದ ವೇಳೆಯೇ ಹಿಂಸಾಚಾರ ಉಂಟಾಗಿತ್ತು.  ಕೇಂದ್ರ ಪಡೆಗಳು ಮತಗಟ್ಟೆಯ ಬಳಿ ಎರಡು ಬಾರಿ ಗುಂಡು ಹಾರಿಸಿದ್ದರು. ಈ ವೇಳೆ ಜನತೆ ತಮ್ಮ ಮತ ಚಲಾಯಿಸುತ್ತಿದ್ದರು, ಕೇಂದ್ರಪಡೆಗಳು ಗುಂಡು ಹಾರಿಸಿದ ಪರಿಣಾಮ ಪಕ್ಷದ  ನಾಲ್ವರು ಕಾರ್ಯಕರ್ತರು ಸಾವನ್ನಪ್ಪಿದರು ಎಂದು ಟಿಎಂಸಿ ಆರೋಪಿಸಿದೆ. 

ಆದರೆ ಚುನಾವಣಾ ಆಯೋಗ ಕೇಂದ್ರ ಪಡೆಗಳು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿವೆ ಎಂದು ಆಯೋಗ ಕೇಂದ್ರ ಪಡೆಗಳಿಗೆ ಕ್ಲೀನ್ ಚಿಟ್ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com