ಕೋವಿಡ್ ಲಸಿಕೆ ಅಭಿಯಾನಕ್ಕೆ ರಾಯಭಾರಿಯಾಗಿ ನಟ ಸೋನ್ ಸೂದ್‌ರನ್ನು ಘೋಷಿಸಿದ ಸಿಎಂ ಅಮರೀಂದರ್ ಸಿಂಗ್

ಬಾಲಿವುಡ್ ನಟ ಸೋನು ಸೂದ್ ಅವರನ್ನು ರಾಜ್ಯದ ಕೋವಿಡ್ 19 ವ್ಯಾಕ್ಸಿನೇಷನ್ ಡ್ರೈವ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.

Published: 11th April 2021 08:41 PM  |   Last Updated: 11th April 2021 08:41 PM   |  A+A-


Sonu Sood-Amarinder Singh

ಸೋನು ಸೂದ್-ಅಮರೀಂದರ್ ಸಿಂಗ್

Posted By : Vishwanath S
Source : Online Desk

ಚಂಡಿಗಢ್: ಬಾಲಿವುಡ್ ನಟ ಸೋನು ಸೂದ್ ಅವರನ್ನು ರಾಜ್ಯದ ಕೋವಿಡ್ 19 ವ್ಯಾಕ್ಸಿನೇಷನ್ ಡ್ರೈವ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ. 

ಲೋಕೋಪಕಾರಿ ನಟನಾಗಿರುವ ಸೋನು ಸೂದ್ ಅವರು ಕೋವಿಡ್ 19 ವ್ಯಾಕ್ಸಿನೇಷನ್ ಡ್ರೈವ್‌ನ ಬ್ರಾಂಡ್ ಅಂಬಾಸಿಡರ್ ಆಗುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಅಮರೀಂದರ್ ಸಿಂಗ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

'ಪ್ರತಿ ಪಂಜಾಬಿಯನ್ನು ತಲುಪಲು ಮತ್ತು ರಕ್ಷಿಸಲು ನಮ್ಮ ಅಭಿಯಾನವನ್ನು ಬೆಂಬಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಬೇಗನೆ ಲಸಿಕೆ ನೀಡುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಸಿಂಗ್ ಹೇಳಿದರು. ಇದಕ್ಕೆ ಉತ್ತರಿಸಿದ ಸೂದ್, "ಈ ಡ್ರೈವ್‌ನ ಭಾಗವಾಗುತ್ತಿರುವುದು ಒಂದು ದೊಡ್ಡ ಗೌರವ. ಪ್ರತಿಯೊಬ್ಬರಿಗೂ ಶೀಘ್ರದಲ್ಲೇ ಲಸಿಕೆ ತಲುಪುವಂತೆ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ. 

ಇತ್ತೀಚಿನ ವಾರಗಳಲ್ಲಿ ಪಂಜಾಬ್ ನಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಶನಿವಾರ ಹೊಸದಾಗಿ 3,294 ಪ್ರಕರಣಗಳು ಪತ್ತೆಯಾಗಿದ್ದು 58 ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಹೆಚ್ಚಿನ ಕೊರೋನಾವೈರಸ್ ಲಸಿಕೆಗಳನ್ನು ನೀಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು. ರಾಜ್ಯದಲ್ಲಿ ಡೋಸ್ ಗಳು ಇನ್ನೂ ಐದು ದಿನಗಳು ಮಾತ್ರ ಇರುತ್ತದೆ ಎಂದು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp