ಜೋಡಿ ಕೊಲೆ: ಶಂಕಿತನನ್ನು ಪತ್ತೆ ಮಾಡಿದ ಪೊಲೀಸರು, ಬಂಧನವಷ್ಟೇ ಬಾಕಿ!

ನಗರವನ್ನು ಬೆಚ್ಚಿ ಬೀಳಿಸಿದ್ದ 75 ವರ್ಷದ ಮಹಿಳೆ, ಮಗನ ಸ್ನೇಹಿತನ ಭೀಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಶಂಕಿತನನ್ನು ಪತ್ತೆ ಮಾಡಿದ್ದು, ಬಂಧಿಸುವುದಷ್ಟೇ ಬಾಕಿ ಇದೆ. 
ಪೊಲೀಸ್ ತನಿಖೆ (ಸಾಂಕೇತಿಕ ಚಿತ್ರ)
ಪೊಲೀಸ್ ತನಿಖೆ (ಸಾಂಕೇತಿಕ ಚಿತ್ರ)

ಬೆಂಗಳೂರು: ನಗರವನ್ನು ಬೆಚ್ಚಿ ಬೀಳಿಸಿದ್ದ 75 ವರ್ಷದ ಮಹಿಳೆ, ಮಗನ ಸ್ನೇಹಿತನ ಭೀಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಶಂಕಿತನನ್ನು ಪತ್ತೆ ಮಾಡಿದ್ದು, ಬಂಧಿಸುವುದಷ್ಟೇ ಬಾಕಿ ಇದೆ. 

ಈ ಜೋಡಿ ಕೊಲೆಯ ತನಿಖೆಯನ್ನು ಪುಟ್ಟೇನಹಳ್ಳಿ ಪೊಲೀಸರು ನಡೆಸುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿ,  ಮಮತಾ ಬಸು, ಒಡಿಶಾ ಮೂಲದ ದಬ್ರಾತ್ ಬೆಹ್ರಾ ಅವರನ್ನು ಹತ್ಯೆ ಮಾಡಲು ಏಕಾಂಗಿಯಾಗಿ ಬಂದಿದ್ದವನ ಬಗ್ಗೆ ಸ್ಪಷ್ಟ ಸುಳಿವು ದೊರೆತಿದೆ. 

ತನಿಖೆ ವೇಳೆ ಎರಡು ವಿಶೇಷ ತಂಡಗಳು ಕೆಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿತ್ತು. ಹತ್ಯೆಗೆ ಒಂದು ದಿನ ಮುಂಚಿತವಾಗಿ ಭೇಟಿ ನೀಡಿದ್ದ ಇಬ್ಬರು ಪುರುಷರೂ ಈ ಪೈಕಿ ಇದ್ದರು. ಬ್ರಾಡ್ ಬ್ಯಾಂಡ್ ಸಂಪರ್ಕ ನೀಡುವುದಕ್ಕಾಗಿ ಅವರು ಮನೆಗೆ ಭೇಟಿ ನೀಡಿದ್ದರು. ಸುತ್ತಮುತ್ತಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಹತ್ಯೆ ಮಾಡಿರುವವರ ಸ್ಪಷ್ಟ ಸುಳಿವು ದೊರೆತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. 

ಅಪರಾಧದ ದೃಶ್ಯ ಗೊಂದಲಕ್ಕೀಡಾದ ಕಾರಣ ವಿಧಿವಿಜ್ಞಾನ ತಜ್ಞರಿಗೆ ಯಾವುದೇ ಪ್ರಮುಖ ಸುಳಿವುಗಳು ಅಥವಾ ಪುರಾವೆಗಳು ಸಿಕ್ಕಿಲ್ಲ. ಜೆಪಿ ನಗರ 7 ನೇ ಹಂತದ ಪುಟ್ಟೇನಹಳ್ಳಿಯಲ್ಲಿ75 ವರ್ಷದ ಮಹಿಳೆ ಮತ್ತು ಆಕೆಯ ಮಗನ ಸ್ನೇಹಿತನೊಬ್ಬನನ್ನು ಭೀಕರ ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿತ್ತು. ಲ್ಯಾಪ್‌ಟಾಪ್, ಚಿನ್ನದ ಬೆಲೆಬಾಳುವ ವಸ್ತುಗಳು ಮತ್ತು ಸಿಸಿಟಿವಿ ಕ್ಯಾಮೆರಾಗೆ ಜೋಡಿಸಲಾದ ಡಿವಿಆರ್‌ನೊಂದಿಗೆ ಕೊಲೆಗಾರ ಪರಾರಿಯಾಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com