ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ರಿಜ್ವಿ ಅರ್ಜಿ ವಜಾ: ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಮುಸ್ಲಿಂ ಧರ್ಮಗುರುಗಳು,ಸಂಘಟನೆಗಳು

ಕುರಾನ್ ನಲ್ಲಿರುವ 26 ವಚನಗಳನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮುಸ್ಲಿಂ ಧರ್ಮಗುರುಗಳು ಮತ್ತು ಸಂಘಟನೆಗಳು ಸೋಮವಾರ ಸ್ವಾಗತಿಸಿದ್ದು, ಧಾರ್ಮಿಕ ಗ್ರಂಥಗಳನ್ನು ದೇಶದಲ್ಲಿ ಗೌರವದಿಂದ ಪರಿಗಣಿಸಲಾಗುತ್ತದೆ ಎಂದು ಇದು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ

ಲಖನೌ: ಕುರಾನ್ ನಲ್ಲಿರುವ 26 ವಚನಗಳನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮುಸ್ಲಿಂ ಧರ್ಮಗುರುಗಳು ಮತ್ತು ಸಂಘಟನೆಗಳು ಸೋಮವಾರ ಸ್ವಾಗತಿಸಿದ್ದು, ಧಾರ್ಮಿಕ ಗ್ರಂಥಗಳನ್ನು ದೇಶದಲ್ಲಿ ಗೌರವದಿಂದ ಪರಿಗಣಿಸಲಾಗುತ್ತದೆ ಎಂದು ಇದು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಕೋರಿದ್ದ ಅರ್ಜಿ ಸಂಪೂರ್ಣ ನಿಷ್ಪ್ರಯೋಜಕವಾಗಿದ್ದು, ಅರ್ಜಿದಾರರಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸುತ್ತಿರುವುದಾಗಿಯೂ ಕೋರ್ಟ್ ಹೇಳಿದೆ. 

ಸುಪ್ರೀಂಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ದೇಶದಲ್ಲಿ ಧಾರ್ಮಿಕ ಪುಸ್ತಕಗಳನ್ನು ಗೌರವದಿಂದ ನಡೆಸಲಾಗುತ್ತಿದೆ ಎಂದು ಇದು ಸಾಬೀತುಪಡಿಸುತ್ತದೆ. ಇದು ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ಮುಸ್ಲಿಮರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮುಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಪಿಟಿಐಗೆ ತಿಳಿಸಿದ್ದಾರೆ.

ಧಾರ್ಮಿಕ ಗ್ರಂಥಗಳ ಬಗ್ಗೆ ಭವಿಷ್ಯದಲ್ಲಿ ಯಾರೂ ಪ್ರಶ್ನೆಗಳನ್ನು ಎತ್ತದಂತೆ ಸರ್ಕಾರಿ ರಿಜ್ವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ತೀರ್ಪಿನ ಬಗ್ಗೆ ದೇಶದ ಮುಸ್ಲಿಮರನ್ನು ಅಭಿನಂದಿಸುತ್ತೇನೆ ಎಂದು ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಮೌಲಾನಾ ಯಸೂಬ್ ಅಬ್ಬಾಸ್ ಹೇಳಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com