ಮಹಾರಾಷ್ಟ್ರ, ಪಂಜಾಬಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳ, ಮೋದಿಯನ್ನು ದೂಷಿಸಿದ ರಾವತ್!

ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಪಂಜಾಬಿನಲ್ಲಿ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಸೇನಾ ಸಂಸದ ಸಂಜಯ್ ರಾವತ್ ಸೋಮವಾರ ದೂಷಿಸಿದ್ದಾರೆ.
ಶಿವಸೇನಾ ಮುಖಂಡ ಸಂಜಯ್ ರಾವತ್
ಶಿವಸೇನಾ ಮುಖಂಡ ಸಂಜಯ್ ರಾವತ್

ಮುಂಬೈ: ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಪಂಜಾಬಿನಲ್ಲಿ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಸೇನಾ ಸಂಸದ ಸಂಜಯ್ ರಾವತ್ ಸೋಮವಾರ ದೂಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಕೇಂದ್ರ ಹೊರಡಿಸಿದ ಪ್ರತಿಯೊಂದು ಸೂಚನೆಗಳನ್ನು ಮಹಾರಾಷ್ಟ್ರ ಅನುಸರಿಸಿದೆ. ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ವರ್ತಿಸಬೇಕು ಮತ್ತು ರಾಜ್ಯಗಳನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದರು. 

ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್ ಗಢ, ಕರ್ನಾಟಕ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ದಿನನಿತ್ಯ ಏರಿಕೆಯಾಗುತ್ತಿದ್ದು, ಹೊಸ ಸೋಂಕುಗಳಲ್ಲಿ ಶೇಕಡಾ 83.02 ರಷ್ಟು , ಈ ರಾಜ್ಯಗಳದ್ದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. 

ಕೊರೋನಾ ನಿಯಂತ್ರಣದಲ್ಲಿ ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್ ಗಢ ಮಾತ್ರ ವಿಫಲವಾದರೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೊರೋನಾವೈರಸ್ ವಿರುದ್ಧದ ಹೋರಾಟ ಆರಂಭವಾದಾಗಿನಿಂದಲೂ ಕೇಂದ್ರ ಸರ್ಕಾರ ಮೊದಲು ವೈಫಲ್ಯಕ್ಕೊಳಗಾಗಿದೆ ಎಂದು ದೂಷಿಸಿದ ರಾವತ್, ಬಿಜೆಪಿ ಆಡಳಿತ ಇಲ್ಲದ  ರಾಜ್ಯಗಳನ್ನು ಮಾತ್ರ ಏಕೆ ವೈಫಲ್ಯಕ್ಕೊಳಗಾಗಿವೆ ಎಂದು ಗುರುತಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. 

ಬಿಜೆಪಿ ಮುಖ್ಯಮಂತ್ರಿ ಇರುವ  ರಾಜ್ಯಗಳಲ್ಲಿ ಕೊರೋನಾವೈರಸ್ ಕಣ್ಮರೆಯಾಗಿದೆಯೇ? ಕೇಂದ್ರವು ಮಹಾರಾಷ್ಟ್ರಕ್ಕೆ ಲಸಿಕೆಗಳು ಮತ್ತು ರೆಮ್ಡೆಸಿವಿರ್ ನೀಡಬೇಕು. ಗುಜರಾತ್‌ನ ಬಿಜೆಪಿ ಕಚೇರಿಗಳಲ್ಲಿ ರೆಮ್‌ಡೆಸಿವಿರ್ ಹೇಗೆ ಲಭ್ಯವಿದೆ ಎಂಬುದನ್ನು  ಎಲ್ಲರೂ ನೋಡಿದ್ದಾರೆ ಆದರೆ ಅದು ಮಹಾರಾಷ್ಟ್ರಕ್ಕೆ ಲಭ್ಯವಾಗುತ್ತಿಲ್ಲ ಎಂದು ರಾವತ್ ಹೇಳಿದರು. 

ರಾಜ್ಯದ ವರ್ಚಸ್ಸನ್ನು ಕೆಡಿಸುವ ಪ್ರಯತ್ನವನ್ನು ಮಹಾರಾಷ್ಟ್ರ ಬಿಜೆಪಿ ನಾಯಕರು ಖಂಡಿಸಬೇಕು, ಇಲ್ಲದಿದ್ದರೆ ಅವರು ರಾಜ್ಯದಲ್ಲಿನ ರಾಜಕೀಯದಲ್ಲಿ ವ್ಯವಹಾರ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com