ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ನೇಮಕ

ಚುನಾವಣಾ ಆಯುಕ್ತ ಸುಶೀಲ್‍ ಚಂದ್ರ ಅವರನ್ನು ರಾಷ್ಟ್ರಪತಿ ರಾಮನಾಥ್‍ ಕೋವಿಂದ್  ಅವರು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದಾರೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ. 
ಸುಶೀಲ್ ಚಂದ್ರ
ಸುಶೀಲ್ ಚಂದ್ರ

ನವದೆಹಲಿ: ಚುನಾವಣಾ ಆಯುಕ್ತ ಸುಶೀಲ್‍ ಚಂದ್ರ ಅವರನ್ನು ರಾಷ್ಟ್ರಪತಿ ರಾಮನಾಥ್‍ ಕೋವಿಂದ್  ಅವರು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದಾರೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ. 

ಸುಶೀಲ್‍ ಚಂದ್ರ ಅವರು ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಶಾಸನಾತ್ಮಕ ಇಲಾಖೆಯಿಂದ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. 

 ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಸುನಿಲ್ ಅರೋರಾ ಅವರ ಅಧಿಕಾರವಧಿ ಸೋಮವಾರ ಅಂತ್ಯಗೊಂಡಿತು. ತೆರವಾಗಲಿರುವ ಈ ಸ್ಥಾನಕ್ಕೆ ಸುಶೀಲ್ ಚಂದ್ರ ಅವರನ್ನು ನೇಮಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರಾಗಿ ಇವರ ಅಧಿಕಾರವಧಿ ಮೇ 14, 2022ರವರೆಗೂ ಇರಲಿದೆ.  ಸುಶೀಲ್ ಚಂದ್ರ ಅವರ ನೇತೃತ್ವದಲ್ಲಿ ಆಯೋಗ ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್ ರಾಜ್ಯಗಳ ಚುನಾವಣೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com